
ದುಬೈ: ಮುಂಬರುವ 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು 14 ಹೊಸ ತಂಡಗಳಿಗೆ ಐಸಿಸಿ ಅರ್ಹತಾ ಟೂರ್ನಿಯನ್ನು ಆಯೋಜಿಸಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.
ಇದೇ ಜುಲೈ 9 ರಿಂದ 26ರವರೆಗೆ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳಲ್ಲಿ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿ ನಡೆಯಲಿದ್ದು, ಟೂರ್ನಿಗೆ ಆಯ್ಕೆಯಾಗಿರುವ 14 ಹೊಸ ತಂಡಗಳನ್ನು ಇಂದು ಐಸಿಸಿ ಪ್ರಕಟಿಸಿದೆ. 18 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 51 ಪಂದ್ಯಗಳು ನಡೆಯಲಿದ್ದು, ಇಲ್ಲಿ ಮೊದಲ ಹತ್ತು ಸ್ಥಾನಗಳಿಸುವ ತಂಡಗಳು 2016ರಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.
2016ರ ಮಾರ್ಚ್ 11ರಿಂದ ಏಪ್ರಿಲ್ 3ರವೆರೆಗೆ ನಡೆಯಲಿರುವ ಟಿ20 ವಿಶ್ಪಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಸೇರಿದಂತೆ ಟೆಸ್ಟ್ ಮಾನ್ಯತೆ ಪಡೆದಿರುವ ಪ್ರಮುಖ ತಂಡಗಳೊಂದಿಗೆ ಸೇರಿ ಈ 10 ತಂಡಗಳು ವಿಶ್ವಕಪ್ ಗಾಗಿ ಸೆಣಸಲಿವೆ. ಪ್ರಸ್ತುತ ಐಸಿಸಿ ಪ್ರಕಟಿಸಿರುವ 2015ರ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯ ನಿಯಮಾವಳಿಗಳ ಪ್ರಕಾರ ಟೂರ್ನಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ 2 ತಂಡಗಳು ನೇರವಾಗಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲಿವೆ.
ಉಳಿದ 8 ತಂಡಗಳು ತಮ್ಮ ತಮ್ಮ ಅರ್ಹತೆಗಾಗಿ ಟೂರ್ನಿಯಲ್ಲಿ ಇತರೆ ತಂಡಗಳನ್ನು ಎದುರಿಸಬೇಕಾಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ಕಳೆದ ಬಾರಿಯ ಟಿ20 ವಿಶ್ವಕಪ್ ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಆಫ್ಘಾನಿಸ್ತಾನ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳು ನೇರವಾಗಿ ಅರ್ಹತೆಪಡೆಯುವ ವಿಶ್ವಾಸಹೊಂದಿವೆ.
2015ರ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಿರುವ ತಂಡಗಳು ಇಂತಿವೆ
ಆಫ್ಘಾನಿಸ್ತಾನ, ಕೆನಡಾ, ಹಾಂಕ್ ಕಾಂಗ್, ಐರ್ಲೆಂಡ್, ಜೆರ್ಸೆ, ಕೀನ್ಯಾ, ನಮೀಬಿಯಾ, ನೇಪಾಳ, ನೆದರ್ ಲ್ಯಾಂಡ್, ಒಮನ್, ಪಪುವಾ ನ್ಯೂಗಿನಿಯಾ, ಸ್ಕಾಟ್ ಲ್ಯಾಂಡ್, ಯುಎಇ ಮತ್ತು ಅಮೆರಿಕಾ
Advertisement