
ಬ್ರಿಡ್ಜ್ ಟೌನ್: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಮಹಾಧಿವೇಶನ ಆರಂಭಗೊಂಡಿದ್ದು, ಐಸಿಸಿಗೆ ನೂತನ ಅಧ್ಯಕ್ಷರನ್ನು ಆರಿಸುವ ಪ್ರಮುಖ ಉದ್ದೇಶವೂ ಸೇರಿದಂತೆ ಹಲವಾರು ವಿಚಾರಗಳು ಈ ಸಭೆಯಲ್ಲಿ ಚರ್ಚೆಗೆ ಬರಲಿವೆ.
ಈ ಸಭೆಯಲ್ಲಿ ಐಸಿಸಿಯ 50ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. 2015ರ ವಿಶ್ವಕಪ್ ತರುವಾಯ, ಅಂದಿನ ಐಸಿಸಿ ಅಧ್ಯಕ್ಷೆರಾಗಿದ್ದ ಬಾಂಗ್ಲಾದೇಶದ ಮುಸ್ತಾಫ ಕಮಲ್ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಹೊಸ ಅಧ್ಯಕ್ಷರು ಆಯ್ಕೆಯಾಗಿಲ್ಲ. ಇದೀಗ, ಅವರ ಆಯ್ಕೆಗೆ ಕಸರತ್ತು ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ನಜಾಮ್ ಸೇಥಿಯವರು ಆರಿಸಿಬರಬಹುದೆಂದು ನಿರೀಕ್ಷಿಸಲಾಗಿದೆ.
ಕಮಲ್ ಅವರು ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಒಲವು ತೋರಿದ್ದಾರೆ. ಐಸಿಸಿ ಅಧ್ಯಕ್ಷರ ಆಯ್ಕೆಯನ್ನು ಹೊರತುಪಡಿಸಿದರೆ, ಸರ್ಬಿಯಾ ದೇಶವು ತನಗೆ ಐಸಿಸಿ ಸದಸ್ಯತ್ವ ಬೇಕೆಂದು ಸಲ್ಲಿಸಿರುವ ಮನವಿ ಪತ್ರ ಮಹಾಧಿವೇಶನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆಂದು ನಿರೀಕ್ಷಿಸಲಾಗಿದೆ. ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಹಾಗೂ ಭದ್ರತಾ ಸಮಿತಿಯ (ಎಸಿಎಸ್‍ಯು) ಮೂಲಕ ಐಸಿಸಿಗೆ ಸರ್ಬಿಯಾ ಅರ್ಜಿ ಸಲ್ಲಿಸಿದೆ. ಇನ್ನು, 2015ರ ವರ್ಷದಲ್ಲಿ ಐಸಿಸಿಯ ನಿಯಮಾವಳಿಗಳು, ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ಕೈಗೊಳ್ಳಬೇಕಿರುವ ಕಾರ್ಯತಂತ್ರಗಳ ಬಗ್ಗೆ ಮಹಾಧಿವೇಶದಲ್ಲಿ ಚರ್ಚಿಸಲಾಗುತ್ತದೆ. ಕ್ರಿಕೆಟ್ ಅಭಿವೃದ್ಧಿಗಾಗಿ, ವಿವಿಧ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ನೀಡಿರುವ ಸಲಹೆಗಳನ್ನೂ ಅಧಿವೇಶನದಲ್ಲಿ ಸ್ವೀಕರಿಸಿ ಚರ್ಚಿಸಲಾಗುವುದು.
Advertisement