
ಆ್ಯಂಟ್‍ವರ್ಪ್: ಹಾಕಿ ವಿಶ್ವ ಲೀಗ್ ಸೆಮಿಫೈನಲ್‍ನ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯುವ ಮುನ್ನ ಭಾರತ ವನಿತಾ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.
ಶನಿವಾರ ನಡೆಯಲಿರುವ ಮಹತ್ವನೀಯ ಪಂದ್ಯದಲ್ಲಿ ರಿತು ರಾಣಿ ಸಾರಥ್ಯದ ಭಾರತ ಮಹಿಳಾ ಹಾಕಿ ತಂಡ ಬಲಿಷ್ಟ ಆಸ್ಟ್ರೇಲಿಯಾ ವನಿತೆಯರಿಂದ ಸತ್ವಪರೀಕ್ಷೆ ಎದುರಿಸಬೇಕಾಗಿದೆ. `ಬಿ' ಗುಂಪಿನಲ್ಲಿರುವ ಭಾರತ ತಂಡ ಆರಂಭಿಕ ಸುತ್ತಿನ ಎರಡೂ ಪಂದ್ಯಗಳಲ್ಲಿ ದಯನೀಯ ಸೋಲುಂಡಿತ್ತು. ಬೆಲ್ಜಿಯಂ ವಿರುದ್ಧ 0-1 ಹಾಗೂ ನ್ಯೂಜಿಲೆಂಡ್ ವಿರುದ್ಧ 0-5 ಗೋಲುಗಳ ಹೀನಾಯ ಸೋಲಿನಿಂದ ಕಂಗೆಟ್ಟಿತ್ತು. ಆದರೆ ಮೂರನೇ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಿತು ರಾಣಿ ಪಡೆ 3-1 ಗೋಲುಗಳಿಂದ ಪೋಲೆಂಡ್ ವಿರುದ್ಧ ಜಯ ಪಡೆದು ಟೂರ್ನಿಯಲ್ಲಿ ಪುಟಿದೆದ್ದು ನಿಂತಿತು.
ಪೊಲೆಂಡ್ ವಿರುದ್ಧದ ಗೆಲುವಿನಲ್ಲಿ ನಾಯಕಿ ರಾಣಿ ತೋರಿದ ಪ್ರಚಂಡ ಆಟ ಸಹ ಆಟಗಾರ್ತಿಯರಿಗೆ ಸ್ಫೂರ್ತಿಯಂತಿತ್ತು. ಚೆಂಡನ್ನು ಪಾಸ್ ಮಾಡುವಲ್ಲಿ ಅತ್ಯಂತ ಚಲನಶೀಲ ಪ್ರದರ್ಶನ ನೀಡಿದ್ದ ಅವರು ಟೂರ್ನಿಯಲ್ಲಿನ ಭಾರತದ ಮೊದಲ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ``ಆಸ್ಟ್ರೇಲಿಯಾ ತಂಡ ಬಲಿಷ್ಟವಾಗಿದ್ದು, ಅದರ ವಿರುದ್ಧದ ಪಂದ್ಯ ನಮಗೆ ನಿರ್ಣಾಯಕವಾಗಿದೆ.
ಇಷ್ಟಾದರೂ ನ್ಯೂಜಿಲೆಂಡ್‍ನಲ್ಲಿ ಇತ್ತೀಚೆಗೆ ನಡೆದ ಹಾಕಿ ಬೇ ಕಪ್ 2015ರ ಟೂರ್ನಿಯಲ್ಲಿ ಅದು ಗೋಲು ಗಳಿಸದಂತೆ ದಿಟ್ಟ ಪೈಪೋಟಿ ನೀಡಿದ್ದೆವು. ಆದಾಗ್ಯೂ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ 2-4 ಗೋಲುಗಳಿಂದ ಸೋಲನುಭವಿಸಿದ್ದು ನಮ್ಮ ನೆನಪಿನಲ್ಲಿದೆ. ಹೀಗಾಗಿ ಈ ಬಾರಿ ಆ ಸೋಲಿಗೆ ಪ್ರತಿಯಾಗಿ ಜಯ ಸಾ„ಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ'' ಎಂದು ಪಂದ್ಯದ ಮುನ್ನಾ ದಿನದಂದು ನಡೆದ ಸುದ್ದಿಗೋಷ್ಠಿಯಲ್ಲಿ ರಿತು ರಾಣಿ ತಿಳಿಸಿದರು.
Advertisement