
ಢಾಕಾ: ಬಾಂಗ್ಲಾದೇಶದ ಪ್ರತಿಭಾನ್ವಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯ ಆಲ್‍ರೌಂಡ್ ಆಟಗಾರರಲ್ಲಿ ಮತ್ತೊಮ್ಮೆ ಅಗ್ರಮೇವ ಸ್ಥಾನ ಪಡೆದಿದ್ದಾರೆ.
ಇತ್ತೀಚಿನ ಐಸಿಸಿ ರ್ಯಾಂಕಿಂಗ್ ಪಟ್ಟಿಯ ಅಂಕಿಅಂಶಗಳಂತೆ ಶಕೀಬ್ ಮೂರೂ ಪ್ರಕಾರದ ಕ್ರಿಕೆಟ್ ಮಾದರಿಯಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಭಾರತ ವಿರುದ್ಧದ ಸರಣಿಯ ನಂತರ ಬಿಡುಗಡೆಯಾಗಿರುವ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಶಕೀಬ್ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ (404) ಅವರನ್ನು ಹಿಂದಿಕ್ಕಿ ಒಟ್ಟಾರೆ 408 ಪಾಯಿಂಟ್ಸ್ ಗಳನ್ನು ಕಲೆಹಾಕಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ.
ಮೂರನೇ ಸ್ಥಾನವನ್ನು ಶ್ರೀಲಂಕಾದ ಮತ್ತೋರ್ವ ಆಲ್‍ರೌಂಡರ್ ಆ್ಯಂಜೆಲೊ ಮ್ಯೂಥ್ಯೂಸ್ (308) ಅಲಂಕರಿಸಿದ್ದಾರೆ ಎಂದು ಸ್ಪೋಟ್ರ್ಸ್ ಕೀಡಾ ವರದಿ ಮಾಡಿದೆ. ಅಂದ್ಹಾಗೆ ಭಾರತ ವಿರುದ್ಧದ ಸರಣಿಯಲ್ಲಿ ಶಕೀಬ್ ಮೂರು ಪಂದ್ಯಗಳಿಂದ 61.50ರ ಸರಾಸರಿಯಲ್ಲಿ 123 ರನ್ ಗಳಿಸಿದ್ದಲ್ಲದೆ, 99 ರನ್‍ಗಳನ್ನಿತ್ತು 3 ವಿಕೆಟ್ ಪಡೆದಿದ್ದರು. ಬಾಂಗ್ಲಾದ ಐತಿಹಾಸಿಕ 2-1ರ ಸರಣಿ ಗೆಲುವಿನಲ್ಲಿ ಶಕೀಬ್ ಕೊಡುಗೆ ಕೂಡ ಮುಖ್ಯವೆನಿಸಿತ್ತು.
Advertisement