ಟೀಂ ಇಂಡಿಯಾ ಪ್ರದರ್ಶನ ಅಚ್ಚರಿಯದಲ್ಲ: ಶಾಸ್ತ್ರಿ

ವಿಶ್ವಕಪ್ ಆರಂಭಕ್ಕೂ ಮುನ್ನ ಸೋಲಿನ ಸುಳಿಯಲ್ಲಿ ಸಿಲುಕಿ ನಲುಗಿದ್ದ ಭಾರತ ಕ್ರಿಕೆಟ್ ತಂಡ, ಟೂರ್ನಿ ಆರಂಭದ ನಂತರ ಅತ್ಯುತ್ತಮ...
ರವಿ ಶಾಸ್ತ್ರಿ
ರವಿ ಶಾಸ್ತ್ರಿ
Updated on

ಪರ್ತ್: ವಿಶ್ವಕಪ್ ಆರಂಭಕ್ಕೂ ಮುನ್ನ ಸೋಲಿನ ಸುಳಿಯಲ್ಲಿ ಸಿಲುಕಿ ನಲುಗಿದ್ದ ಭಾರತ ಕ್ರಿಕೆಟ್ ತಂಡ, ಟೂರ್ನಿ ಆರಂಭದ ನಂತರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಜೇಯ ಯಾತ್ರೆ ಮುಂದುವರಿಸಿದೆ.

ಭಾರತ ತಂಡದ ಈ ಯಶಸ್ವಿ ಪ್ರದರ್ಶನ ಅಚ್ಚರಿ ತಂದಿಲ್ಲ ಎಂದು ತಂಡದ ನಿರ್ದೇಶಕ ರವಿ ಶಾಸ್ತ್ರಿ ತಿಳಿಸಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರರ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊಂದಿದ್ದೇನೆ. ಹಾಗಾಗಿ ತಂಡದ ಪ್ರದರ್ಶನದಿಂದ ಅಚ್ಚರಿ ಹೊಂದಿಲ್ಲ.

ಅಲ್ಲದೇ, ಭಾರತ ತಂಡದ ಶುಭಾರಂಭದಿಂದ ಅಚ್ಚರಿ ಪಡುವ ಅಗತ್ಯವೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿರುವುದರಿಂದ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಗೆಲವು ದಾಖಲಿಸಲು ಸಾಧ್ಯವಾಯಿತು. ಈ ಎರಡೂ ಪಂದ್ಯಗಳೂ ನಿರೀಕ್ಷೆಗೆ ತಕ್ಕಂತೆ ಹಾಗೂ ನಮ್ಮ ತಂತ್ರಕ್ಕೆ ತಕ್ಕ ರೀತಿಯಲ್ಲಿ ಸಾಗಿತ್ತು ಎಂದರು.

ತ್ರಿಕೋನ ಏಕದಿನ ಸರಣಿಯ ನಂತರ ತಂಡದ ಆಟಗಾರರು ಮಾನಸಿಕವಾಗಿ ಬಳಲಿದ್ದರು. ಹಾಗಾಗಿ ವಿಶ್ವಕಪ್‍ಗೆ ಅವರು ಹುಮ್ಮಸ್ಸಿನಿಂದ ಕಣಕ್ಕಿಳಿಯುವತ್ತ ಗಮನ ಹರಿಸಿದರು. ಕ್ರಿಕೆಟ್‍ನಿಂದ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆದ ಆಟಗಾರರು ವಿಶ್ವಕಪ್‍ಗೆ ಮಾನಸಿಕವಾಗಿ ಸಿದ್ಧರಾದರು.

ಪ್ರಾಮಾಣಿಕವಾಗಿ ಹೇಳುವುದಾದರೆ, ತ್ರಿಕೋನ ಏಕದಿನ ಸರಣಿ ಸಮಯ ಹಾಗೂ ಶಕ್ತಿಯನ್ನು ವ್ಯಯ ಮಾಡಿತೆ ಹೊರತೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com