
ಮುಂಬೈ: ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಾಲಿವುಡ್ ನಟಿ ಗೀತಾ ಬಸ್ರಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಹಲವಾರು ವರ್ಷಗಳಿಂದ ಹರ್ಭಜನ್ ಮತ್ತು ಗೀತಾ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಹರ್ಭಜನ್ ಜೀವನದ ಹೊಸ ಇನ್ನಿಂಗ್ಸ್ ಶುರು ಮಾಡಲು ಸಿದ್ಧತೆ ನಡೆಸಿದ್ದಾರೆ. ಮಾರ್ಚ್ ತಿಂಗಳ ಮಧ್ಯಾವಧಿಯಲ್ಲಿ ಇವರಿಬ್ಬರೂ ವಿವಾಹವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಷಯದ ಬಗ್ಗೆ ಗೀತಾ ಮತ್ತು ಹರ್ಭಜನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಿ ಟ್ರೈನ್ ಎಂಬ ಬಾಲಿವುಡ್ ಸಿನಿಮಾದ ಮೂಲಕ ಗಮನ ಸೆಳೆದ ಗೀತಾ ಕ್ರಿಕೆಟ್ ವೀಕ್ಷಣೆಗೆ ಹರ್ಭಜನ್ ಸಿಂಗ್ ಜತೆ ಸ್ಟೇಡಿಯಂಗೆ ಬರುತ್ತಿದ್ದರು. ಮುಂಬೈ ಇಂಡಿಯನ್ಸ್ ಗ್ಯಾಲರಿಯಲ್ಲಿ ಗೀತಾ ಉಪಸ್ಥಿತಿ ಇದ್ದೇ ಇರುತ್ತಿತ್ತು. ಏತನ್ಮಧ್ಯೆ, ಹಲವೆಡೆ ಇವರಿಬ್ಬರೂ ಜತೆ ಜತೆಯಾಗಿ ಸುತ್ತಾಡ ತೊಡಗಿದಾಗ ಭಜ್ಜಿ ಜತೆ ಗೀತಾ ಅಫೇರ್ ಇದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾದವು.
ಸಿನಿಮಾ ನಟಿ ಎಂಬುದಕ್ಕಿಂತ ಹೆಚ್ಚು ಹರ್ಭಜನ್ ಸಿಂಗ್‌ನ ಪ್ರೇಯಸಿ ಎಂದೇ ಗೀತಾ ಫೇಮಸ್. ಈಗ ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರ ಪ್ರಣಯ ಕಥೆಗಳ ಪಟ್ಟಿಯಲ್ಲಿ ಭಜ್ಜಿ ಮತ್ತು ಗೀತಾ ಹೆಸರು ಕೂಡಾ ಸೇರಿಕೊಂಡಿದೆ.
Advertisement