
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಂತೆ, ನೂತನವಾಗಿ ಬಿಸಿಸಿಐ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜಗಮೋಹನ್ ದಾಲ್ಮಿಯಾ ಸಹ ಬಿಸಿಸಿಐ ಸ್ವಚ್ಛತೆಗೆ ಮುಂದಾಗಿದ್ದಾರೆ.
ಫಿಕ್ಸಿಂಗ್, ಬೆಟ್ಟಿಂಗ್ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ನಡೆಯಿಂದಾಗಿ ಬಿಸಿಸಿಐಗೆ ಅಂಟಿರುವ ಕಳಂಕಗಳ ಸರಮಾಲೆಯನ್ನು ತೊಡೆದುಹಾಕಿ ಬಿಸಿಸಿಐಯನ್ನು ಪರಿಶುದ್ಧಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇತ್ತೀಚಿನ ಘಟನಾವಳಿಗಳಿಂದ ಬಿಸಿಸಿಐನ ವರ್ಚಸ್ಸಿಗೆ ಧಕ್ಕೆಯಾಗಿದ್ದು ನಿಜ. ಹಾಗಾಗಿ, ಕಳೆದುಕೊಂಡ ವರ್ಚಸ್ಸನ್ನು ಪುನರ್ ಸ್ಥಾಪಿಸುವುದೇ ನನ್ನ ಮೊದಲ ಗುರಿ. ಅಲ್ಲದೆ, ಶೀಘ್ರದಲ್ಲೇ ಆರಂಭಗೊಳ್ಳಲಿರುವ ಐಪಿಎಲ್ ಪಂದ್ಯಾವಳಿಯು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವುದೂ ನನ್ನ ಮತ್ತೊಂದು ಆದ್ಯತೆ' ಎಂದು ತಿಳಿಸಿದರು.
ಶುಭಾಷಯ: ಹಾಲಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಶುಭ ಕೋರಿದ ನೂತನ ಅಧ್ಯಕ್ಷರು, ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಯಶಸ್ಸು ದಾಖಲಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
Advertisement