ವಿಶ್ವಕಪ್: ಶ್ರೀಲಂಕಾ ದಾಖಲೆ ಮುರಿದ ಬಾಂಗ್ಲಾ

2015ರ ವಿಶ್ವಕಪ್ ದಾಖಲೆಗಳಿಗೆ ಹೆಸರಾಗಿದೆ. ಪ್ರತಿಯೊಂದು ಪಂದ್ಯ ಯಾವುದಾದರೊಂದು ದಾಖಲೆಗೆ ಸಾಕ್ಷಿಯಾಗುತ್ತಿದೆ.
ಬಾಂಗ್ಲಾದೇಶ
ಬಾಂಗ್ಲಾದೇಶ

ನೆಲ್ಸನ್: 2015ರ ವಿಶ್ವಕಪ್ ದಾಖಲೆಗಳಿಗೆ ಹೆಸರಾಗಿದೆ. ಪ್ರತಿಯೊಂದು ಪಂದ್ಯ ಯಾವುದಾದರೊಂದು ದಾಖಲೆಗೆ ಸಾಕ್ಷಿಯಾಗುತ್ತಿದೆ. ನ್ಯೂಜಿಲೆಂಡ್ ನ ನೆಲ್ಸನ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ 318 ರನ್‘ಗಳನ್ನು ಚೇಸ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಗೆ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಸ್ಕಾಟ್ ಲ್ಯಾಂಡ್ ಆಟಗಾರರು ಅಬ್ಬರದ ಆಟವಾಡಿದರು. ಕೆ.ಜೆ. ಕೋಯ್ಜರ್ ಅವರ ಅಮೋಘ 156 ರನ್ ಗಳ ನೆರವಿನಿಂದ ಸ್ಕಾಟ್ ಲ್ಯಾಂಡ್ ನಿಗದಿತ 50 ಓವರ್ ಗಳಲ್ಲಿ 318 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಬ್ಲಾಂಗಾ ಪರ ತಸ್ಕಿನ್ ಅಹಮದ್ 3 ವಿಕೆಟ್ ಪಡೆದರೆ, ನಾಸೀರ್ ಹುಸೈನ್ 2 ವಿಕೆಟ್, ಮಷ್ರಫ್ ಮಾರ್ಟಝ, ಶಕೀಬ್ ಅಲ್ ಹಸನ್, ಶಬೀರ್ ರೆಹಮನ್ ತಲಾ 1 ವಿಕೆಟ್ ಪಡೆದರು.

319 ರನ್ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಬಾಂಗ್ಲಾ ಆರಂಭದಲ್ಲಿ ಸೌಮ್ಯ ಸರ್ಕಾರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಬಂದ ಬ್ಯಾಟ್ಸ್ ಮನ್ ಗಳು ಸ್ಕಾಟ್ ಲ್ಯಾಂಡ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ತಮಿಮ್ ಇಕ್ಬಾಲ್ 95, ಮೊಹಮದುಲ್ಲಾ 62, ಮುಶ್ಫಿಕರ್ ರಹೀಮ್ 60 ಮತ್ತು ಶಕೀಬ್ ಉಲ್ ಹಸನ್ ಅವರ 52 ರನ್ ಸೇರಿದಂತೆ 4 ಅರ್ಧಶತಕಗಳ ನೆರವಿನಿಂದ 11 ಎಸೆತ ಬಾಕಿ ಉಳಿದಿರುವಂತೆ ಬಾಂಗ್ಲಾ ಗೆಲುವಿನ ಗುರಿ ತಲುಪಿತು.

ಸ್ಕಾಟ್ ಲ್ಯಾಂಡ್ ಪರ ಡೇವಿ 2 ವಿಕೆಟ್ ಪಡೆದರೆ, ವಾರ್ಡ್ಲವ್, ಇವಾನ್ಸ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com