ಪಾರ್ಟಿ ಮಾಡಲು ಪತ್ನಿಗೆ ವಿಚ್ಛೇದನ ಕೊಟ್ಟ ಗ್ರೇಮ್ ಸ್ಮಿತ್..!

ಪ್ರವಾಸಕ್ಕೆ ತೆರಳಲು ಮತ್ತು ಪಾರ್ಟಿಗಳನ್ನು ಮಾಡಲು ಕ್ರಿಕೆಟಿಗ ಗ್ರೇಮ್ ಸ್ಮಿತ್ ತಮ್ಮ ಪತ್ನಿಮಾರ್ಗನ್ ಡೀನ್ ಗೆ...
ಗ್ರೇಮ್ ಸ್ಮಿತ್ ಮತ್ತು ಪತ್ನಿ ಮಾರ್ಗನ್ (ಸಂಗ್ರಹ ಚಿತ್ರ)
ಗ್ರೇಮ್ ಸ್ಮಿತ್ ಮತ್ತು ಪತ್ನಿ ಮಾರ್ಗನ್ (ಸಂಗ್ರಹ ಚಿತ್ರ)

ಕೇಪ್ ಟೌನ್: ಪ್ರವಾಸಕ್ಕೆ ತೆರಳಲು ಮತ್ತು ಪಾರ್ಟಿಗಳನ್ನು ಮಾಡಲು ಕ್ರಿಕೆಟಿಗ ಗ್ರೇಮ್ ಸ್ಮಿತ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ 2011ರಲ್ಲಿ ಐರ್ಲೆಂಡ್ ಮೂಲದ ಗಾಯಕಿ ಮಾರ್ಗನ್ ಡೀನ್ ಅವರನ್ನು ವಿವಾಹವಾಗಿದ್ದು, ಈ ಜೋಡಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಮೂಲಗಳ ಪ್ರಕಾರ ಈ ಜೋಡಿ 2 ವಾರಗಳ ಹಿಂದೆಯೇ ವಿವಾಹ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಮಿತ್ ಪತ್ನಿ ಮಾರ್ಗನ್ ಅವರ ಸ್ನೇಹಿತೆಯೊಬ್ಬರು 2 ವಾರಗಳ ಹಿಂದೆಯೇ ಈ ವಿಚಾರವನ್ನು ಬಹಿರಂಗಗೊಳಿಸಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಸ್ಮಿತ್ ಮತ್ತು ಮಾರ್ಗನ್ ವಿವಾಹ ವಿಚ್ಛೇದನಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಗ್ರೇಮ್ ಸ್ಮಿತ್ ಪಾರ್ಟಿ ಪ್ರಿಯರಾಗಿದ್ದು, ಸದಾ ಕಾಲ ಒಂದಿಲ್ಲೊಂದು ಪಾರ್ಟಿಯಲ್ಲಿ ಹಾಜರಿರುತ್ತಾರೆ. ಅಲ್ಲದೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವುದನ್ನು ಕೂಡ ಸ್ಮಿತ್  ಇಷ್ಟಪಡುತ್ತಾರೆ. ಇದಕ್ಕೆಲ್ಲ ತಮ್ಮ ಪತ್ನಿ ಮಾರ್ಗನ್ ಅಡ್ಡಿ ಬರುತ್ತಿದ್ದು, ಇದೇ ಕಾರಣಕ್ಕಾಗಿ ಸ್ಮಿತ್ ವಿಚ್ಛೇದನ ಪಡೆದಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದು ಗಾಸಿಪ್ ನ ಪ್ರಕಾರ ಸ್ಮಿತ್ ಗೆ ಪಾರ್ಟಿಗಳಲ್ಲಿ ಹಲವು ಯುವತಿಯರ ಪರಿಚಯವಾಗಿದ್ದು, ಸದಾಕಾಲ ಅವರೊಂದಿಗೆ ಫ್ಲರ್ಟ್ ಮಾಡುತ್ತಿರುತ್ತಾರೆ. ಈ ವಿಚಾರ ಮಾರ್ಗನ್ ಗೆ ತಿಳಿದು ಅವರು ಈ ಹಿಂದೆ ಆಕ್ಷೇಪಿಸಿದ್ದರು ಎಂದು ತಿಳಿದುಬಂದಿದೆ.

ಎಸ್ ಎಂಎಸ್ ಮಾಡಿ ಸಿಕ್ಕಿಬಿದ್ದ ಸ್ಮಿತ್
ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿ ಮಾರ್ಗನ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದ ಸ್ಮಿತ್, ತಮ್ಮ ದಾಂಪತ್ಯ ಜೀವನ ಮುರಿದುಹೋಗಲು ತಮಗೆ ಇಷ್ಟವಿಲ್ಲ. ಹೀಗಾಗಿ ವಿಚ್ಛೇದನವನ್ನು ತಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಸ್ಮಿತ್ ತಮ್ಮ ಪರ ವಕೀಲರಿಗೆ ಕಳುಹಿಸಬೇಕೆಂದುಕೊಂಡಿದ್ದ ಎಸ್ ಎಂಎಸ್ ಅನ್ನು ತಪ್ಪಾಗಿ ತಮ್ಮ ಪತ್ನಿಗೆ ಕಳುಹಿಸಿ ಸಿಕ್ಕಿಬಿದಿದ್ದರು. ಆ ಎಸ್ ಎಂಎಸ್ ಮೂಲಕ ಮಾರ್ಗನ್ ಗೆ ಸ್ಮಿತ್ ವಿಚ್ಛೇದನ ನೀಡುವುದು ಖಾತರಿಯಾಗಿತ್ತು. ಮತ್ತೊಂದು ಮೂಲಗಳ ಪ್ರಕಾರ ಸ್ಮಿತ್ ಕಳುಹಿಸಿದ್ದ ಸಂದೇಶದಲ್ಲಿ ತಮಗೆ ಆದಷ್ಟು ಬೇಗ ವಿಚ್ಛೇಧನ ಬೇಕು ಎಂದು ಹೇಳಿಕೊಂಡಿದ್ದರು. ಅಲ್ಲದೆ ತಮ್ಮ ಹೊಸ ಗೆಳತಿಯೊಬ್ಬಳ ಕುರಿತು ಕೂಡ ಸಂದೇಶದಲ್ಲಿ ಮಾಹಿತಿ ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ವರದಿ ನಿರಾಕರಿಸಿದ ಸ್ಮಿತ್
ಇನ್ನು ತಮ್ಮ ಪತ್ನಿ ಮಾರ್ಗನ್ ಗೆ ವಿಚ್ಛೇದನ ನೀಡಿರುವ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಸ್ಮಿತ್ ಅಲ್ಲಗಳೆದಿದ್ದಾರೆ. ಖಾಸಗಿ ಸುದ್ಧಿ ವಾಹಿನಿಯೊಂದಿಗೆ ಮಾತನಾಡಿರುವ ಗ್ರೇಮ್ ಸ್ಮಿತ್, ತಪ್ಪು ಎಸ್ ಎಂಎಸ್ ಸಂದೇಶದಿಂದ ವಿಚ್ಛೇದನವಾಗಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com