ವಿಶ್ವಕಪ್: ಸಂಗಕ್ಕಾರ ದಾಖಲೆಯ 4ನೇ ಶತಕ

ವಿಶ್ವಕಪ್ ಟೂರ್ನಿಯ ಸ್ಟಾಟ್ ಲ್ಯಾಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಶತಕ ಸಿಡಿಸಿದ್ದು..
ಸಂಗಕ್ಕಾರ ಮತ್ತು ದಿಲ್ಶಾನ್ (ಸಂಗ್ರಹ ಚಿತ್ರ)
ಸಂಗಕ್ಕಾರ ಮತ್ತು ದಿಲ್ಶಾನ್ (ಸಂಗ್ರಹ ಚಿತ್ರ)

ಹೋಬರ್ಟ್: ವಿಶ್ವಕಪ್ ಟೂರ್ನಿಯ ಸ್ಟಾಟ್ ಲ್ಯಾಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಶತಕ ಸಿಡಿಸಿದ್ದು, ಟೂರ್ನಿಯಲ್ಲಿ ಇದು ಅವರ ದಾಖಲೆಯ ಸತತ ನಾಲ್ಕನೆ ಶತಕವಾಗಿದೆ.

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಸತತ ನಾಲ್ಕು ಶತಕಗಳನ್ನು ಸಿಡಿಸಿದ ಖದಾಖಲೆಯನ್ನು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರು ಮಾಡಿದ್ದು, ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿರುವ ಅವರು ಈ ಹಿಂದೆ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು ಶತಕ ಸಿಡಿಸಿದ್ದರು.

ಇನ್ನು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಲಂಕಾ ದಿಲ್ಶಾನ್ ಮತ್ತು ಸಂಗಕ್ಕಾರ ಅವರ ಭರ್ಜರಿ ಶತಕದ ನೆರವಿನಿಂದ ಸ್ಕಾಟ್ ಲ್ಯಾಂಡ್ ವಿರುದ್ಧ 363 ರನ್ ಗಳ ಭರ್ಜರಿ ಮೊತ್ತವನ್ನು ಕಲೆಹಾಕಿದೆ. ಆರಂಭಿಕ ಆಘಾತ ಎದುರಿಸಿದ ಲಂಕಾ ತಂಡ ಕೇವಲ 24 ರನ್‌ ಆಗುವಷ್ಟರಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ತಿರಿಮನ್ನೆ 4 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ಆದರೆ ಆರಂಭಿಕ ಆಘಾತದಿಂದ ಲಂಕಾ ತಂಡವನ್ನು ಸಂಗಕ್ಕಾರ ಮತ್ತು ದಿಲ್ಶಾನ್ ಜೋಡಿ ಮೇಲೆತ್ತಿತು.

ಸ್ಕಾಟ್ ಲ್ಯಾಂಡ್‌ ಬೌಲರ್‌ಗಳನ್ನು ದಂಡಿಸಿದ ಸಂಗಕ್ಕಾರ ಮತ್ತು ದಿಲ್ಶಾನ್‌  ಜೋಡಿ 2 ನೇ ವಿಕೆಟ್‌ಗೆ ಭರ್ಜರಿ 192 ರನ್‌ಗಳ  ಜೊತೆಯಾಟವಾಡಿತು. ಇತ್ತ ದಿಲ್ಶಾನ್‌ ಶತಕ ಪೂರೈಸಿದ ಬೆನ್ನಲ್ಲೇ ಸಂಗಕ್ಕಾರ ಕೂಡ ಶತಕ ಸಿಡಿಸಿ ಸಂಭ್ರಮಿಸಿದರು.

ಒಟ್ಟು 99 ಎಸೆತಗಳನ್ನು ಎದುರಿಸಿದ ದಿಲ್ಶಾನ್ 10ಬೌಂಡರಿ ಮತ್ತು1ಸಿಕ್ಸರ್‌ ನೆರವಿನಿಂದ ಭರ್ಜರಿ 104 ರನ್ ಗಳನ್ನು ಸಿಡಿಸಿ ಔಟ್ ಆದರು. ಬಳಿಕ ನಾಯಕ ಎಂಜೆಲೋ ಮ್ಯಾಥ್ಯೂಸ್ ಮತ್ತು ಜನಿತ್ ಪೆರೇರಾ ಅವರು ಲಂಕಾ ತಂಡದ ಮೊತ್ತವನ್ನು ಹಿಗ್ಗಿಸಿದರು. ಇದೇ ವೇಳೆ ಮ್ಯಾಥ್ಯೂಸ್ ಕೂಡ 51 ರನ್ ಗಳಿಸಿ ಮ್ಯಾಚನ್ ಅವರಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 363 ರನ್ ಗಳನ್ನು ಕಲೆಹಾಕಿದೆ. ಸ್ಕಾಟ್ ಲ್ಯಾಂಡ್ ಈ ಪಂದ್ ಗೆಲ್ಲಲು 364 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಬೇಕಿದೆ.

ಈಗಾಗಲೇ ಸ್ಕಾಟ್ ಲ್ಯಾಂಡ್ ತಂಡ ಬ್ಯಾಟಿಂಗ್ ಆರಂಭಿಸಿದ್ದು, ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯ ಆರಂಭಿಕ ಆಟಗಾರನಾದ ಕೋಟ್ಜರ್ ಅವರ ವಿಕೆಟ್ ಕಳೆದುಕೊಂಡಿದೆ. ಲಂಕಾದ ಲಸಿತ್ ಮಾಲಿಂಗ ಕೋಟ್ಜರ್ ಅವರ ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಲಂಕಾ ತಂಡ 1 ಓವರ್ ಗೆ 3 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com