ಮಾಜಿದ್‍ರನ್ನು ಮನೆಗೆ ಕಳುಹಿಸಿದ ಸ್ಕಾಟ್ಲೆಂಡ್

ವಿವಾದಾತ್ಮಕ ಟ್ವೀಟ್ ಮಾಡಿದ ಸ್ಕಾಟ್ಲೆಂಡ್ ತಂಡದ ಪ್ರಮುಖ ಆಟಗಾರ ಮಾಜಿದ್ ಹಕ್ ಅವರನ್ನು ಮನೆಗೆ ಕಳುಹಿಸಲಾಗಿದೆ...
ಮಾಜಿದ್ ಹಕ್  (ಸಂಗ್ರಹ ಚಿತ್ರ)
ಮಾಜಿದ್ ಹಕ್ (ಸಂಗ್ರಹ ಚಿತ್ರ)

ಹೋಬರ್ಟ್: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ ಸ್ಕಾಟ್ಲೆಂಡ್ ತಂಡದ ಪ್ರಮುಖ ಆಟಗಾರ ಮಾಜಿದ್ ಹಕ್ ಅವರನ್ನು ಮನೆಗೆ ಕಳುಹಿಸಲಾಗಿದೆ.

ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾದ ನಂತರ ಟ್ವೀಟರ್‍ನಲ್ಲಿ ಬೇಸರ ವ್ಯಕ್ತಪಡಿಸಿರುವ ಮಾಜಿದ್, ಜನಾಂಗೀಯ ವಿವಾದ ಸೃಷ್ಠಿಸಿದ್ದರು. ಅಲ್ಪಸಂಖ್ಯಾತರಾಗಿರುವಾಗ ಯಾವಾಗಲು ಪರಿಸ್ಥಿತಿ ಕಷ್ಟವಾಗಿರುತ್ತದೆ ಎಂದು ಮಾಜಿದ್ ಟ್ವೀಟ್ ಮಾಡಿದ್ದರು.

ನಂತರ ಆ ಟ್ವೀಟ್ ಅನ್ನು ತೆಗೆದು ಹಾಕಲಾಗಿದೆ. ಪಾಕಿಸ್ತಾನ ಮೂಲದ ಮಾಜಿದ್ ಹಕ್, ಸ್ಕಾಟ್ಲೆಂಡ್‍ನಲ್ಲಿ ಜನಿಸಿದ್ದರು. 32 ವರ್ಷದ ಮಾಜಿದ್, ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 60 ವಿಕೆಟ್ ಪಡೆದಿದ್ದು, ಸ್ಕಾಟ್ಲೆಂಡ್ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಬಾಕಿ ಉಳಿದಿರುವಾಗಲೇ ತಂಡದ ಆಡಳಿತ ಮಂಡಳಿ ತನ್ನ ಹಿರಿಯ ಆಟಗಾರರನ್ನು ವಾಪಸ್ ಕಳುಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com