
ನವದೆಹಲಿ: ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಭಾರತ ವನಿತೆಯರ ಹಾಕಿ ತಂಡ ವಿಶ್ವ ಹಾಕಿ ಲೀಗ್‍ನ 2ನೇ ಸುತ್ತಿನ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಈ ಮೂಲಕ ಸೆಮಿ ಫೈನಲ್ ಟೂರ್ನಿಗೆ ಪ್ರವೇಶಿಸಿದೆ.
ಭಾನುವಾರ ಮೇಜರ್ ಧ್ಯಾನ್‍ಚಂದ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು ಪೋಲೆಂಡ್ ವಿರುದಟಛಿ 3-1 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಭಾರತದ ವನಿತೆಯರು
ಜೂನ್‍ನಲ್ಲಿ ನಡೆಯಲಿರುವ ಸೆಮಿ ಫೈನಲ್ ಸುತ್ತಿಗೆ ಪ್ರವೇಶಿಸಲಿದ್ದಾರೆ. ಪಂದ್ಯದ ಆರಂಭದಲ್ಲೇ ಅಂದರೆ 15ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು, ಇದಾದ ತಕ್ಷಣವೇ 17ನೇ ನಿಮಿಷದಲ್ಲಿ ಪೋ ಲೆಂಡ್‍ನ ವಲಾಸೆಕ್ ಒರಿಯಾನ ಗೋಲು ದಾಖಲಿಸಿ ಆತಿಥೇಯರಿಗೆ ತೀವ್ರ ಸ್ಪರ್ಧೆ ನೀಡಿದರು.
44ನೇ ನಿಮಿಷದಲ್ಲಿ ರಾಣಿ ಗೋಲು ದಾಖಲಿಸಿ ತಂಡಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು. ಈ ಪಂದ್ಯದ ಮೂಲಕ ಭಾರತದ ಪರ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಸಾಧನೆ ಮÁಡಿದ ರೀತು ರಾಣಿ 59ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಗೆಲವು ಖಚಿತಪಡಿಸಿದರು.
ಮಲೇಷ್ಯಾಗೆ 3 ನೇ ಸ್ಥಾನ: ವನಿತೆಯರ ವಿಶ್ವಹಾಕಿ ಲೀಗ್ ಪಂದ್ಯಾವಳಿಯಲ್ಲಿ ಮಲೇಷ್ಯಾ ತಂಡ ಮೂರನೇ ಸ್ಥಾನಗಳಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡ ಥಾಯ್ಲೆಂಡ್ ವಿರುದ್ಧ 3-0ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಪಂದ್ಯದ 11ನೇ ನಿಮಿಷದಲ್ಲಿ ನೊರಾಜಿನ್ ಸುಮಾಂಟ್ರಿ, 29ನೇ ಮತ್ತು 49ನೇ ನಿಮಿಷದಲ್ಲಿ ಫಾಜಿಲಾ ಸಿಲ್ವೆಸ್ಟರ್ ಸಿಲಿನ್ ಗೋಲು ದಾಖಲಿಸಿದರು.
Advertisement