ನವದೆಹಲಿ: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಹಿನ್ನೆಲೆಯಲ್ಲಿ, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮನೆಗೆ ಬಿಗಿಭದ್ರತೆ ಒದಗಿಸಲಾಗಿದೆ. ರಾಂಚಿಯಲ್ಲಿರುವ ಅವರ ಬಂಗಲೆಗೆ ಅರೆಸೇನಾಪಡೆ ಯೋಧರು ಸುತ್ತುವರಿದಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.
ಇದರ ಜೊತೆಗೇ, ವಿವಿಧ ನಗರಗಳಲ್ಲಿರುವ ಟೀಂ ಇಂಡಿಯಾ ಆಟಗಾರರ ಮನೆಗಳಿಗೂ ಭದ್ರತೆ ಒದಗಿಸಲಾಗಿದೆ. ಈ ಹಿಂದೆ, ಕೆಲವು ಪಂದ್ಯಾವಳಿಗಳಲ್ಲಿ ಭಾರತ ವೈಫಲ್ಯ ಅನುಭವಿಸಿದ್ದಾಗ, ಉದ್ರಿಕ್ತಗೊಂಡಿದ್ದ ಟೀಂ ಇಂಡಿಯಾದ ಕೆಲ ಅಭಿಮಾನಿಗಳು ಧೋನಿ ಹಾಗೂ ಇತರ ಆಟಗಾರರ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
Advertisement