
ಬೆಂಗಳೂರು: ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಕೆ. ಗೋವಿಂದ ರಾಜ್ ಅವರು ಭಾರತೀಯ ಬಾಸ್ಕೆಟ್‍ಬಾಲ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಸ್ಥಾನವನ್ನು ಅಲಂಕ ರಿಸಿದ ಮೊದಲ ಕನ್ನಡಿಗನಾಗಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಭಾರತೀಯ ಬಾಸ್ಕೆಟ್ ಬಾಲ್ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ 2015ರಿಂದ 2019ರ ಅವ„ಗೆ ನೂತನ ಆಡಳಿತ ಮಂಡಳಿಯ ಚುನಾವಣೆ ನಡೆಸಲಾಗಿದ್ದು, ಆಡಳಿತ ಮಂಡಳಿಯ ಎಲ್ಲಾ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ ಗೋವಿಂದರಾಜು ಅವರು ದಕ್ಷಿಣ ಭಾರತದಿಂದ ಈ ಸ್ಥಾನ ಅಲಂಕರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಹಾಗೂ 3 ವೀಕ್ಷಕರಾದ ಎಚ್.ಎಸ್ ವೆಂಕಟೇಶ್ ನಿರ್ದೇಶಕರು ಯುವಜನ ಮತ್ತು ಕ್ರೀಡಾ ಇಲಾಖೆ, ಸತ್ಯಜಿತ್ ಸಂಕ್ರಿತ್ ವೀಕ್ಷಕರು ಯುವಜನ ಹಾಗೂ ಕೇಂದ್ರ ಕ್ರೀಡಾ ಇಲಾಖೆ ಹಾಗೂ ಮಗೇಶ್ವರನ್ ಸಾಬಾ ವೀಕ್ಷಕರು ಅಂತಾರಾಷ್ಟ್ರೀಯ ಬಾಸ್ಕೆಟ್‍ಬಾಲ್ ಸಂಸ್ಥೆ ಏಷ್ಯಾ ವಿಭಾಗ, ಅವರ ಉಪಸ್ಥಿತಿಯಲ್ಲಿ ಚುನಾವಣೆಯನ್ನು ಸಂಸ್ಥೆಯ ಸಂವಿಧಾನ ಹಾಗೂ ಕೇಂದ್ರ ಕ್ರೀಡಾ ಇಲಾಖೆಯ ನಿಯಮಾವಳಿ ಅನುಗುಣವಾಗಿ ನಡೆಸಲಾಗಿದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಆರ್.ಎಸ್ ಗಿಲ್ ತಿಳಿಸಿದ್ದಾರೆ.
ಕ್ರೀಡೆಯ ಅಭಿವೃದ್ಧಿ ಪ್ರಮುಖ ಗುರಿ ಭಾರತೀಯ ಬಾಸ್ಕೆಟ್‍ಬಾಲ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದದ ನಂತರ ಮಾತನಾಡಿದ ಕೆ.ಗೋವಿಂದರಾಜು ಅವರು, ಏಷ್ಯಾ ಖಂಡದಲ್ಲಿ ಭಾರತ ಸ್ಕೆಟ್‍ಬಾಲ್ ತಂಡ ಅಗ್ರ ಎರಡು ಸ್ಥಾನಗಳಲ್ಲಿ ಕಾಣಬೇಕು. ವಿಶ್ವ ಚಾಂಪಿಯನ್ ಶಿಪ್ ಹಾಗೂ ಒಲಿಂಪಿಕ್ಸ್ ನಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಹಾಗಾಗಿ ಭಾರತ ತಂಡ ಉತ್ತಮ ಯಶಸು ಸಾಧಿಸುವಂತೆ ಮಾಡುವ ಸವಾಲಿದೆ ಎಂದರು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯನ್ನು ಬೆಳೆಸಬೇಕು. ಹಾಗಾಗಿ ಹೆಚ್ಚು ಪಂದ್ಯಾವಳಿಯನ್ನು ಆಯೋಜಿಸುವತ್ತ ಗಮನ ಹರಿಸುತ್ತೇವೆ. ಇದೇ ವರ್ಷ ನವೆಂಬರ್ ಹಾಗೂ ಡಿಸೆಂಬರ್‍ನಲ್ಲಿ ರಾಷ್ಟ್ರೀಯ ಚಾಂಪಿಯನ್‍ಶಿಪ್ ಅನ್ನು ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.
Advertisement