
ನವದೆಹಲಿ: ನ್ಯೂಜಿಲೆಂಡ್‍ನಲ್ಲಿ ಏಪ್ರಿಲ್ 11ರಿಂದ 9ರ ವರೆಗೆ ನಡೆಯಲಿರುವ ಹಾಕೆ ಬೇ ಕಪ್ ಮಹಿಳಾ ಹಾಕಿ ಚಾಂಪಿಯನ್‍ಶಿಪ್‍ಗಾಗಿ ಭರವಸೆಯ ಸಂಪರ್ಕ ಆಟಗಾರ್ತಿ ರಿತು ರಾಣಿ ನೇತೃತ್ವದಲ್ಲಿ ಭಾರತದ ವನಿತೆಯರ ತಂಡ ಪ್ರಕಟಿಸಲಾಗಿದೆ.
ರಿತು ರಾಣಿಗೆ ಬೆಂಬಲವಾಗಿ ನಿಲ್ಲಲಿರುವ ದೀಪಿಕಾಗೆ ಉಪನಾಯಕಿ ಪಟ್ಟದ ಜವಾಬ್ದಾರಿ ವಹಿಸಲಾಗಿದೆ. ಈ ಟೂರ್ನಿಯಲ್ಲಿ ಭಾರತ ಅಲ್ಲದೆ, ಆತಿಥೇಯ ನ್ಯೂಜಿಲೆಂಡ್, ಅರ್ಜೆಂಟೀನಾ, ಆಸ್ಟ್ರೇಲಿಯಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ತಂಡಗಳು ಪಾಲ್ಗೊಳ್ಳಲಿವೆ. ಭಾರತ ತಂಡದ ವನಿತೆಯರು ಏ.11ರಂದು ನಡೆಯಲಿರುವ ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. 200ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾರತ ತಂಡ ಪ್ರತಿನಿಧಿಸಿರುವ ನಾಯಕಿ ರಿತು ರಾಣಿಯ ಅನುಭವ ತಂಡಕ್ಕೆ ಉತ್ತಮ ನೆರವು ನೀಡಲಿದೆ.
ಭಾರತ ವನಿತೆಯರ ತಂಡ
ಗೋಲ್ ಕೀಪರ್ಸ್-ಸವಿತಾ, ರಜನಿ ಎಟಿಮರ್ಪು ರಕ್ಷಣಾ ವಿಭಾಗ- ದೀಪ್ ಗ್ರೇಸ್ ಎಕ್ಕಾ, ದೀಪಿಕಾ (ಉಪನಾಯಕಿ), ಸುನಿತಾ ಲಾಕ್ರಾ, ಸುಶೀಲಾ ಚಾನು, ಎಂ.ಎನ್. ಪೊನ್ನಮ್ಮ, ಮೋನಿಕಾ. ಸಂಪರ್ಕ ವಿಭಾಗ-ರಿತು ರಾಣಿ (ನಾಯಕಿ), ನಮಿತಾ ಟೊಪ್ಟೋ, ಲಿಲಿಮಾ ಮಿಂಜ್, ಲಿಲ್ಲಿ ಚಾನು, ನವಜೋತ್ ಕೌರ್, ಸೌಂದರ್ಯಯೆಂದಲಾ. ಮುನ್ಪಡೆ ವಿಭಾಗ- ವಂದನಾ ಕಟಾರಿಯಾ, ರಾಣಿ, ಪೂನಂ ರಾಣಿ, ಅನುರಾಧಾ ಥೋಕಚೊಮ್.
Advertisement