
ಹೈದರಾಬಾದ್: ಕಳೆದ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಪ್ಲೇ ಆಫ್ ಸುತ್ತಿನತ್ತ ಹೆಜ್ಜೆ ಹಾಕುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಈಗ ಸನ್ ಆಫ್ ಸುತ್ತಿನತ್ತ ಹೆಜ್ಜೆ ಹಾಕುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಈಗ ಸನ್ ರೈಸರ್ಸ್ ಹೈದರಾಬಾದ್‍ಗೆ ಸವಾಲು ನೀಡಲು ಸಜ್ಜಾಗಿದೆ.
ಈ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶಿಸುವ ಹಾದಿಯನ್ನು ಮತ್ತಷ್ಟು ಸುಗಮವಾಗಿಸಲು ಎದುರು ನೋಡುತ್ತಿದೆ. ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲವು ಅಗತ್ಯವಾಗಿದೆ. ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಜಯ ಹಾಗೂ 4ರಲ್ಲಿ ಸೋಲನುಭವಿಸಿರುವ ಸನ್ ರೈಸರ್ಸ್‍ಗೆ ಪ್ಲೇ ಆಫ್ ಹಾದಿ ಸುಗಮವಾಗಬೇಕಾದರೆ, ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ 8 ಪಂದ್ಯಗಳ ಪೈಕಿ 6ರಲ್ಲಿ ಜಯ ಕೇವಲ 2ರಲ್ಲಿ ಸೋತು 12 ಅಂಕಪಡೆದಿದ್ದು, ಮುಂದಿನ ಸುತ್ತಿನ ಸನಿಹದಲ್ಲಿದೆ. ಸನ್‍ರೈಸರ್ಸ್ ಹೈದರಾಬಾದ್ ತಂಡ ಸ್ಥಿರ ಪ್ರದರ್ಶನದ ಕೊರತೆ ಎದುರಿಸುತ್ತಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಈವರೆಗಿನ ಹಾದಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಇನ್ನು ಹೈದರಾಬಾದ್ ತಂಡ ತವರಿನ ಅಂಗಣದಲ್ಲಿ ಉತ್ತಮ ಫಲಿತಾಂಶ ಪಡೆದಿಲ್ಲ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಸಿಎಸ್‍ಕೆ ಸೋತಿದ್ದರೂ ತಂಡ ಸಮತೋಲನದಲ್ಲಿದೆ. ಹಾಗಾಗಿ ಈ ಪಂದ್ಯದಲ್ಲಿ ಹೈದರಾಬಾದ್ ತವರಿನ ಅಂಗಣದಲ್ಲಿ ಆಡುತ್ತಿದೆಯಾದರೂ, ಸಿಎಸ್‍ಕೆ ಗೆಲವಿನ ಫೇವರಿಟ್ ತಂಡವಾಗಿದೆ.
Advertisement