ಶತಮಾನದ ಬಾಕ್ಸಿಂಗ್ ಕದನ: ಫ್ಲಾಯ್ಡ ಮೇವೆದರ್‌ ಚಾಂಪಿಯನ್

ಶತಮಾನದ ಬಾಕ್ಸಿಂಗ್ ಕದನವೆಂದೇ ಬಿಂಬಿಸಲಾಗುತ್ತಿದ್ದ ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲಾಯ್ಡ ಮೇವೆದರ್‌ ನಡುವಿನ ಬಾಕ್ಸಿಂಗ್ ಪಂದ್ಯ ಭಾನುವಾರ ಬೆಳಗ್ಗೆ ಮುಕ್ತಾಯವಾಗಿದ್ದು, ಫ್ಲಾಯ್ಡ ಮೇವೆದರ್‌ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಫ್ಲಾಯ್ಡ ಮೇವೆದರ್‌ ಚಾಂಪಿಯನ್ (ಚಿತ್ರಕೃಪೆ: ಟೆಲಿಗ್ರಾಫ್)
ಫ್ಲಾಯ್ಡ ಮೇವೆದರ್‌ ಚಾಂಪಿಯನ್ (ಚಿತ್ರಕೃಪೆ: ಟೆಲಿಗ್ರಾಫ್)

ಲಾಸ್‌ ವೇಗಾಸ್‌: ಶತಮಾನದ ಬಾಕ್ಸಿಂಗ್ ಕದನವೆಂದೇ ಬಿಂಬಿಸಲಾಗುತ್ತಿದ್ದ ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲಾಯ್ಡ ಮೇವೆದರ್‌ ನಡುವಿನ ಬಾಕ್ಸಿಂಗ್ ಪಂದ್ಯ ಭಾನುವಾರ ಬೆಳಗ್ಗೆ ಮುಕ್ತಾಯವಾಗಿದ್ದು,  ಫ್ಲಾಯ್ಡ ಮೇವೆದರ್‌ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 8.30ಕ್ಕೆ ಆರಂಭವಾದ ಪಂದ್ಯ 10.15ಕ್ಕೆ ಮುಕ್ತಾಯವಾಯಿತು. ಲಾಸ್ ವೇಗಾಸ್ ನ ಎಂಜಿಎಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಫ್ಲಾಯ್ಡ ಮೇವೆದರ್‌ ಪಾಯಿಂಟ್ಸ್ ಗಳ ಆಧಾರದ ಮೇಲೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆಮೂಲಕ ತಮ್ಮ ಹೆಸರಿನಲ್ಲಿದ್ದ ಅಜೇಯ ದಾಖಲೆಯನ್ನು ಮುಂದುವರೆಸುವ ಮೂಲಕ ಸೋಲಿಲ್ಲದ್ದ ಸರದಾರಾಗಿ ಮೆರೆದಿದ್ದಾರೆ.



ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕು ಮುಂದಾಗಿದ್ದ ಫ್ಲಾಯ್ಡ ಮೇವೆದರ್‌ ತಮ್ಮ ಎದುರಾಳಿ ಮ್ಯಾನಿ ಪ್ಯಾಕ್ವಿಯೋ ಮೇಲೆ ಸವಾರಿ ಮಾಡಿದರು. ಮೇವೆದರ್‌ ತಾವು ಭಾರಿಸುತ್ತಿದ್ದ ಪ್ರತಿಯೊಂದು ಪಂಚ್ ಮಿಸ್ ಆಗದಂತೆ ಎಚ್ಚರ ವಹಿಸಿದ್ದರು. ಆದರೆ ಪಂದ್ಯದ ಆರಂಭದ ಎರಡು ಸುತ್ತಗಳ ಬಳಿಕ ಮಂಕಾದಂತೆ ಕಂಡ ಮ್ಯಾನಿ ಪ್ಯಾಕ್ವಿಯೋ ಅವರ ಬಹುತೇಕ ಪಂಚ್ ಗಳು ಮಿಸ್ ಆಗುತ್ತಿತ್ತು.  ಅಂತಿಮವಾಗಿ ಮೇವೆದರ್‌ 118-110 ,116-112, 116-112 ಅಂತರದಿಂದ ಮ್ಯಾನಿ ಪ್ಯಾಕ್ವಿಯೋ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ಮೇವದರ್ ಈ ಶತಮಾನದ ಶ್ರೇಷ್ಠ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಒಟ್ಟು 12 ಸುತ್ತುಗಳ ಪಂದ್ಯದಲ್ಲಿ 10 ಸುತ್ತುಗಳಲ್ಲಿ ಮೇಲುಗೈ ಸಾಧಿಸಿದ ಮೇವದರ್ ಅರ್ಹವಾಗಿಯೇ ಪ್ರಶಸ್ತಿ ಪಡೆದಿದ್ದಾರೆ.

ವಿಶ್ವಾದ್ಯಂತ ಈ ಕದನವನ್ನು ಸ್ಕೈಸ್ಪೋರ್ಟ್ಸ್ ನೇರಪ್ರಸಾರ ಮಾಡುತ್ತಿದ್ದು, ಕಿಕ್ಕಿರಿದು ತುಂಬಿದ್ದ ಎಂಜಿಎಂ ಮೈದಾನದಲ್ಲಿ ಕಿವಿಡಚಿಕ್ಕುವ ಚಪ್ಪಾಳೆಗಳ ಕರಾತಡನ ಮಧ್ಯೆ ಮೇವದರ್ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಆ ಮೂಲಕ ಮೇವದರ್ 900 ಕೋಟಿ ಮೌಲ್ಯದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ ಯೂರ್ನಿಯಿಂದ ಆಯೋಜಕರಿಗೆ ಬಂದ ಅಪಾರ ಪ್ರಮಾಣದ ಲಾಭಾಂಶದಲ್ಲಿಯೂ ಮೇವದರ್ ಪಾಲು ಪಡೆಯಲಿದ್ದಾರೆ.

ಮೂಲಗಳ ಪ್ರಕಾರ ಒಟ್ಟಾರೆ ಟೂರ್ನಿಯಲ್ಲಿ ಚಾಂಪಿಯನ್ ಮೇವದರ್ ಪ್ರಶಸ್ತಿ ಮೊತ್ತ ಸೇರಿ ಸುಮಾರು 1142 ಕೋಟಿ ಮೊತ್ತವನ್ನು ಬಾಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಮಹತ್ವದ ಕದನದಲ್ಲಿ ಸೋಲನ್ನು ಅನುಭವಿಸಿದ ಮ್ಯಾನಿ ಪಾಕ್ವಿಯೋ ಅವರಿಗೂ ಕೂಡ ರನ್ನರ್ ಅಪ್ ಪ್ರಶಸ್ತಿ ಮೊತ್ತ 600 ಕೋಟಿ ರುಗಳ ಸೇರಿದಂತೆ ಟೂರ್ನಿಯ ಲಾಭಾಂಶದ ಪಾಲು ದೊರೆಯಲಿದೆ. ಇವರಿಗೂ ಸುಮಾರು 761 ಕೋಟಿ ರುಗಳ ವರೆಗೂ ಮೊತ್ತ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಬೆಟ್ಟಿಂಗ್ ನಲ್ಲಿಯೂ ಕದನ ಇತಿಹಾಸ ಬರೆದಿದ್ದು, ಮೂಲಗಳ ಪ್ರಕಾರ ಇದೊಂದು ಸ್ಪರ್ಧೆ ಮೇಲೆ ವಿಶ್ವಾದ್ಯಂತ ಸುಮಾರು 1400 ಕೋಟಿ ಗೂ ಅಧಿಕ ಮೊತ್ತದ ಬೆಟ್ಟಿಂಗ್ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com