
ಯಾವುದೇ ಪಂದ್ಯವಿರಲಿ ಅದರಲ್ಲಿ ಟೀಂ ಇಂಡಿಯಾ ಗೆಲವು ಸಾಧಿಸಿದರೆ, ಮ್ಯಾಚ್ ಮುಗಿದ ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಕಿತ್ತು ತೆಗೆದುಕೊಂಡು ಹೋಗುವುದನ್ನು ನಾವೆಲ್ಲ ನೋಡಿದ್ದೇವೆ. ಧೋನಿ ಹೀಗೆ ಸ್ಟಂಪ್ ತೆಗೆದುಕೊಂಡು ಹೋಗುತ್ತಿರುವುದಕ್ಕೂ ಒಂದು ಕಾರಣವಿದೆ.
ಅದೇನು ಎಂಬುದನ್ನು ಧೋನಿಯೇ ಹೇಳಿದ್ದಾರೆ. ನಾನು ನಿವೃತ್ತನಾದ ನಂತರ ಟೀಂ ಇಂಡಿಯಾದ ಎಲ್ಲ ಆಟಗಳ ವೀಡಿಯೋ ನೋಡುವೆ. ಆಗ ನನ್ನ ಬಳಿಯಿರುವ ಸ್ಟಂಪ್‌ಗಳಲ್ಲಿರು ಪ್ರಾಯೋಜಕರ ಹೆಸರನ್ನು ಹುಡುಕಿ, ಇದು ಯಾವ ಪಂದ್ಯಗಳಲ್ಲಿ ಬಳಸಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲು ಯತ್ನಿಸುವೆ. ನಿವೃತ್ತಿಯ ನಂತರ ಇದೊಂದು ಟೈಮ್ ಪಾಸ್‌ಗಿರುವ ವಿಷಯ ಎಂಬುದಾಗಿ ನಾನಿದನ್ನು ನೋಡುತ್ತಿದ್ದೇನೆ.
ಬಿಸಿಸಿಐಯ ವೆಬ್‌ಸೈಟ್‌ಗಾಗಿ ನೀಡಿದ ಸಂದರ್ಶನವೊಂದರಲ್ಲಿ ಧೋನಿ ಈ ವಿಷಯವನ್ನು ಹೇಳಿದ್ದಾರೆ.
ತಿಂಗಳುಗಳ ಹಿಂದೆಯಷ್ಟೇ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ದುಬಾರಿ ಎಲ್‌ಸಿಡಿ ಸ್ಟಂಪ್‌ಗಳನ್ನು ಬಳಸಲಾಗಿತ್ತು. ಮಾತ್ರವಲ್ಲದೆ ಸ್ಟಂಪ್‌ಗಳನ್ನು ಕೀಳದಂತೆ ಆಟಗಾರರಿಗೆ ತಾಕೀತು ನೀಡಲಾಗಿತ್ತು. ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಾಗ ಧೋನಿ ಸ್ಟಂಪ್ ಕಿತ್ತು ತೆಗೆದುಕೊಳ್ಳಲು ಹೋದಾಗ ಅಂಪೈರ್ ತಡೆದಿದ್ದರು.
Advertisement