ಅಗ್ರಸ್ಥಾನದಲ್ಲಿ ಮುಂದುವರಿದ ನೊವಾಕ್, ಸೆರೆನಾ

ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿಶ್ವ ಟೆನಿಸ್ ರ್ಯಾಂಕಿಂಗ್‍ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ..
ಜಾಕೋವಿಚ್ ಮತ್ತು ಸೆರೆನಾ ವಿಲಿಯಮ್ಸ್
ಜಾಕೋವಿಚ್ ಮತ್ತು ಸೆರೆನಾ ವಿಲಿಯಮ್ಸ್

ಮ್ಯಾಂಡ್ರಿಡ್: ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿಶ್ವ ಟೆನಿಸ್ ರ್ಯಾಂಕಿಂಗ್‍ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

27 ವರ್ಷದ ಜೊಕೊವಿಚ್ ಕಳೆದ 40 ವಾರಗಳಿಂದಲೂ ಪ್ರಥಮ ಶ್ರೆಯಾಂಕದಲ್ಲೇ ಇರುವುದು ವಿಶೇಷ. ಒಟ್ಟು 13, 845 ಅಂಕಗಳನ್ನು ಕಲೆಹಾಕುವ ಮೂಲಕ ತಮ್ಮ ಪ್ರತಿಸ್ಪರ್ಧಿಗಳಾದ

ಸ್ವಿಜರ್ಲೆಂಡ್‍ನ ರೋಜರ್ ಫೆಡರರ್ (8,635) ಹಾಗೂ ಸ್ಕಾಟ್ಲೆಂಡ್‍ನ ಆ್ಯಂಡಿ ಮರ್ರೆ (6,120) ಅವರನ್ನು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಇನ್ನು,
ಸ್ಪೇನ್‍ನ ರಾಫೆಲ್ ನಡಾಲ್ (5,390) 4ನೇ ಸ್ಥಾನ ಪಡೆದಿದ್ದರೆ, ಜಪಾನ್‍ನ ಕೀ ನಿಶಿಕೋರಿ (5,280) ಐದನೇ ಸ್ಥಾನ ಪಡೆದಿದ್ದಾರೆ.

ಏಪ್ರಿಲ್ ಮೊದಲ ವಾರದಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಅಗ್ರಶ್ರೆಯಾಂಕಕ್ಕೆ ಏರಿದ್ದ ಸೆರೆನಾ ವಿಲಿಯಮ್ಸ್, ಪರಿಷ್ಕೃತ ಪಟ್ಟಿಯಲ್ಲಿ ಅದೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಒಟು 9,981 ಅಂಕಗಳನ್ನು ಗಳಿಸಿರುವ ಸೆರೆನಾ ಅವರ ನಂತರದ ಸ್ಥಾನಗಳಲ್ಲಿ ರೊಮೇನಿಯಾದ ಸಿಮೊನಾ ಹಾಲೆಪ್ (7,555) ರಷ್ಯಾದ ಮಾರಿಯಾ ಶರಪೊವಾ (7,525), ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ (6,060) ಹಾಗೂ ಡೆನ್ಮಾರ್ಕ್‍ನ ಕೆರೊಲಿನ್ ವೊಜ್ನಿಯಾಕಿ (4,790) ಇದ್ದಾರೆ.

ಭಾಂಬ್ರಿ ಮೇಲೇರಿಕೆ: ಸೋಮವಾರ ಬಿಡುಗಡೆಗೊಂಡ ಎಟಿಪಿ ಟೆನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಯುಕಿ ಭಾಂಬ್ರಿ 30 ಸ್ಥಾನಗಳ ಏರಿಕೆ ಪಡೆದಿದ್ದಾರೆ. ಇತ್ತೀಚೆಗೆ ನಡೆದಿದ್ದ ತೈಪೇ ಚಾಲೆಂಜರ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾಂಬ್ರಿ ಅವರೀಗ 186ನೇ ಸ್ಥಾನದಲ್ಲಿದ್ದಾರೆ. ಆದರೆ, ಸೋಮïದೇವ್ ದೇವವರ್ಮನ್ ಅವರು ನಾಲ್ಕು ಸ್ಥಾನಗಳ ಇಳಿಕೆ ಕಂಡಿದ್ದಾರೆ. ಪರಿಷ್ಕೃತ ಪಟ್ಟಿಯಲ್ಲಿ ಅವರು 173ನೇ ಸ್ಥಾನದಲ್ಲಿದ್ದಾರೆ.

ಪುರುಷರ ಡಬಲ್ಸ್‍ನಲ್ಲಿ ಹಿರಿಯ ಆಟಗಾರ ಲಿಯಾಂಡರ್ ಪೇಸ್ 23ನೇ ಸ್ಥಾನದಲ್ಲೇ ಮುಂದುವರಿದರೆ, ರೋಹನ್ ಬೋಪಣ್ಣ ಎರಡು ಸ್ಥಾನಗಳ ಏರಿಕೆ ಕಂಡು 24ನೇ ಸ್ಥಾನಕ್ಕೇರಿದ್ದಾರೆ. ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಅಗ್ರಶ್ರೆಯಾಂಕದ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತೀಯ ಎಟಿಪಿ ಟೆನಿಸ್ ಆಟಗಾರರಲ್ಲಿ ಗಮನಾರ್ಹ ಶ್ರೆಯಾಂಕ ಪಡೆದ ಹೆಗ್ಗಳಿಕೆಯನ್ನು ಅಂಕಿತಾ ರೈನಾ ಪಡೆದಿದ್ದು, ಪಟ್ಟಿಯಲ್ಲಿ 235ನೇ ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com