ವೈಯುಕ್ತಿಕ ಶತಕ ನನ್ನ ಅಭಿಲಾಷೆಯಲ್ಲ: ರಹಾನೆ

ನಾನು ತಂಡಕ್ಕಾಗಿ ರನ್ ಪೇರಿಸುತ್ತೇನೆ...ವೈಯುಕ್ತಿಕ ಶತಕ್ಕಾಗಿ ಅಲ್ಲ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಅಜಿಂಕ್ಯ ರಹಾನೆಯವರ ಮನದಾಳದ ಮಾತುಗಳಿವು.
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ

ಮುಂಬೈ: ನಾನು ತಂಡಕ್ಕಾಗಿ ರನ್ ಪೇರಿಸುತ್ತೇನೆ...ವೈಯುಕ್ತಿಕ ಶತಕ್ಕಾಗಿ ಅಲ್ಲ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಅಜಿಂಕ್ಯ ರಹಾನೆಯವರ ಮನದಾಳದ ಮಾತುಗಳಿವು.

ಭಾನುವಾರ ಡೆಲ್ಲಿ ಡೇರ್ ಡೆವಿಲ್ಸ್ ವಿರುದಟಛಿದ ಐಪಿಎಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ರಹಾನೆ, ತಮ್ಮ ಆಟವನ್ನು ಹೀಗೆ ಬಣ್ಣಿಸಿಕೊಂಡರು. ಭಾನುವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ, ರಹಾನೆಯವರ 91 ರನ್ ಗಳ ನೆರವ ನಿಂದ ಎದುರಾಳಿ ತಂಡಕ್ಕೆ 189 ರನ್ ಸಾಲು ನೀಡಿತ್ತು. ಈ ಸವಾಲನ್ನು ಸಮರ್ಥವಾಗಿ ಬೆನ್ನಟ್ಟುವಲ್ಲಿ ವಿಫವಾಗಿದ್ದ ಡೆಲ್ಲಿ 14 ರನ್ ಗಳ ಸೋಲನುಭವಿಸಿತ್ತು.

ಪಂದ್ಯದಲ್ಲಿನ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ನಾನು ಬ್ಯಾಟಿಂಗ್ ಗೆ ಇಳಿದಾಗ ಶತಕ ಗಳಿಸುವುದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಉತ್ತಮವಾಗಿ ಬ್ಯಾಟ್ ಮಾಡುವ ಬಗ್ಗೆಯಷ್ಟೇ ನಾನು ನನ್ನ ಗಮನವನ್ನು ಕೇಂದ್ರೀಕರಿಸಿದ್ದೆ. 190ರ ಆಜೂಬಾಜಿಗೆ ತಂಡದ ಮೊತ್ತವನ್ನು ಕೊಂಡುಯ್ಯುವ ನಿರ್ಧಾನ ಮಾಡಿದ್ದೆ ಎಂದು ಅವರು ತಿಳಿಸಿದರು. ಇದೇ ವೇಳೆ, ಶುಕ್ರವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಟ್ಟ ರೀತಿಯಲ್ಲಿ ಔಟಾದ ರೀತಿ ನನ್ನ ನಿದ್ದೆಗೆಡಿಸಿತ್ತು. ರಾತ್ರಿಯಿಡೀ ಆ ಹೊಡೆತದ ಬಗ್ಗೆಯೇ ಯೋಚಿಸಿದೆ. ಹಾಗಾಗಿ, ಡೆಲ್ಲಿ ವಿರುದ್ಧ ಉತ್ತಮ ಬ್ಯಾಟ್ ಮಾಡಲೇಬೇಕೆಂಬ ಉತ್ಕಟ ಬಯಕೆ ನನ್ನಲ್ಲಿ ಮೂಡಿತ್ತು ಎಂದು ಅವರು ಹೇಳಿದ್ದಾರೆ.

ಕಳಪೆ ಆಟಕ್ಕೆ ಸೋಲು
ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದೇ ತಮ್ಮ ತಂಡದ ಸೋಲಿಗೆ ಕಾರಣವಾಯಿತು ಎಂದು ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ನಾಯಕ ಜೀನ್ ಪಾಲ್ ಡುಮಿನಿ ಹೇಳಿದ್ದಾರೆ. `ನಾವು ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಮಾಡಲಿಲ್ಲ. ಇನ್ನು ನಮ್ಮ ತಂಡದವರ ಕ್ಷೇತ್ರ ರಕ್ಷಯಂತೂ ತೀರ ಕಳಪೆಯಾಗಿತ್ತು. ಕ್ಯಾಚ್‍ಗಳನ್ನು ಕೈಚೆಲ್ಲಿದ್ದಕ್ಕಷ್ಟೇ ನಾನು ಈ ಮಾತು ಹೇಳುತ್ತಿಲ್ಲ. ನಮ್ಮವರ ಒಟ್ಟಾರೆ ಫೀಲ್ಡಿಂಗ್ ಕೆಟ್ಟದಾಗಿತ್ತು' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com