ಗಂಭೀರ್ ನಿರ್ಧಾರಕ್ಕೆ ವಾಸಿಂ ಅಕ್ರಂ ಶ್ಲಾಘನೆ

ಸಂಶಯಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ಸದ್ಯ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸುನೀಲ್ ನಾರಾಯಣ್ ಸ್ಥಾನವನ್ನು ಯಾರು ತುಂಬುತ್ತಾರೆ ಎನ್ನುವಂತಿದ್ದಂತೆಯೇ ..
ವಾಸೀಂ ಅಕ್ರಂ
ವಾಸೀಂ ಅಕ್ರಂ

ಕೋಲ್ಕತಾ: ಸಂಶಯಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ಸದ್ಯ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸುನೀಲ್ ನಾರಾಯಣ್ ಸ್ಥಾನವನ್ನು ಯಾರು ತುಂಬುತ್ತಾರೆ ಎನ್ನುವಂತಿದ್ದಂತೆಯೇ ತರಾತುರಿಯಲ್ಲಿ ಬ್ರಾಡ್ ಹಾಗ್ ಅವರನ್ನು ಸೇರ್ಪಡೆಗೊಳಿಸಿಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ನಿರ್ಧಾರವನ್ನು ಅದೇ ತಂಡದ ಕೋಚ್ ವಾಸಿಂ ಅಕ್ರಂ ಶ್ಲಾಘಿಸಿದ್ದಾರೆ.

ಈಡನ್ ಗಾರ್ಡನ್ ಮೈದಾನದಲ್ಲಿ ಸೋಮವಾರ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಜಯಗಳಿಸಿದ ನಂತರ ಮಾತನಾಡಿದ ವಾಸಿಂ ಅಕ್ರಂ, ವೆಸ್ಟ್ ಇಂಡೀಸ್ ಮೂಲದ ಸ್ಪಿನ್ನರ್ ಸುನೀಲ್ ನಾರಾಯಣ್ ಸ್ಥಾನವನ್ನು ಹಾಗ್ ಸಮರ್ಥವಾಗಿ ತುಂಬಿಕೊಟ್ಟಿದ್ದಾರೆ. ಇದಕ್ಕಾಗಿ ಗಂಭೀರ್ ಗೆ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದರು.

ಅನುಮಾನಾಸ್ಪದ ಬೌಲಿಂಗ್ ಶೈಲಿಯ ಕಾರಣ ಐಪಿಎಲ್‍ನಲ್ಲಿ ಬೌಲಿಂಗ್ ಮಾಡದಂತೆ ಸುನೀಲ್ ಅವರಿಗೆ ಕಳೆದ ಏಪ್ರಿಲ್ 29ರಂದು ಬಿಸಿಸಿಐ ನಿಷೇಧ ಹೇರಿತ್ತು. ಆದರೆ, ವೆಸ್ಟ್ ಇಂಡೀಸ್‍ನ ಸ್ಪಿನ್ನರ್ ಮತ್ತೆ ಬೌಲಿಂಗ್ ಮಾಡಲು ಹಿಂತಿರುಗುವ ವಿಶ್ವಾಸವಿದೆ ಎಂದೂ ಅಕ್ರಂ ತಿಳಿಸಿದ್ದಾರೆ.

ಈ ಮಧ್ಯೆ ವೇಗಿ ಮಾರ್ನ್ ಮಾರ್ಕೆಲ್ ಗಾಯದಿಂದ ಬಳಲುತ್ತಿಲ್ಲ. ಕಲೆ ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆಯಷ್ಟೇ. ಉತ್ತಮ ವೇಗ, ಪುಟಿತ ಹೊಂದಿರುವ ಅವರು ನಮ್ಮ ತಂಡದ ಪ್ರಮುಖ ಬೌಲರ್ ಅಗಿದ್ದು, ಸೂಕ್ತ ಸಂದರ್ಭದಲ್ಲಿ ದಾಳಿಗಿಳಿಯಲಿದ್ದಾರೆ ಎಂದರು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದೂ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com