ಡೇವಿಡ್ ವಾರ್ನರ್ ವಿಕೆಟ್ ಮಹತ್ವದ್ದಾಗಿತ್ತು: ಉಮೇಶ್

ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಅದ್ಭುತ ಜಯಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವ..
ಉಮೇಶ್ ಯಾದವ್
ಉಮೇಶ್ ಯಾದವ್

ಕೋಲ್ಕತಾ: ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಅದ್ಭುತ ಜಯಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವ ಸಂಪಾದಿಸಿದ ವೇಗಿ ಉಮೇಶ್ ಯಾದವ್, ತಮ್ಮ ಪ್ರದರ್ಶನದಿಂದ ತೃಪ್ತರಾಗಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಅವರು, ಸನ್‍ರೈಸರ್ಸ್‍ನ ಆರಂಭಿಕ ಬ್ಯಾಟ್ಸ್‍ಮನ್ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ವಿಕೆಟ್ ನಮ್ಮ ಪಾಲಿಗೆ ಮಹತ್ವದ್ದಾಗಿತ್ತು. ಅವರನ್ನು ಬೇಗನೆ ಔಟ್ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಹೇಳಿದ್ದಾರೆ. ಇನಿಂಗ್ಸ್ ನ ಮೊದಲ ಓವರ್ ಎಸೆದಿದ್ದ ಉಮೇಶ್ ಯಾದವ್, ಮೂರನೇ ಎಸೆತದಲ್ಲಿಯೇ ವಾರ್ನರ್ ಅವರನ್ನು ಬೌಲ್ಡ್ ಮಾಡಿದ್ದರು. ಅಷ್ಟೇ ಅಲ್ಲದೇ, ಇದೇ ಓವರಿನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ನಮನ್ ಓಜಾರ ವಿಕೆಟ್ ಪಡೆಯುವಲ್ಲಿಯೂ ಅವರು ಯಶಸ್ವಿಯಾಗಿದ್ದರು. ಮೊದಲ ಓವರಿನಲ್ಲಿಯೇ ಉಮೇಶ್ 2 ವಿಕೆಟ್ ಉರುಳಿಸಿದ್ದರಿಂದ ಎದುರಾಳಿ ಮೇಲೆ ಒತ್ತಡ ಹೆಚ್ಚಾಗಿ, ಅಬ್ಬರಿಸುವುದು ಕಷ್ಟವಾಗಿತ್ತು. ಮತ್ತೊಂದೆಡೆ ಶುರುವಿನಲ್ಲಿಯೇ ದೊರೆತ ಎರಡು ಸಫಲತೆಗಳು ಕೋಲ್ಕತಾ ತಂಡದ ಕೈ ಮೇಲಾಗುವಂತೆ ಮಾಡಿತ್ತು. ವಾರ್ನರ್ ಅವರನ್ನು ಬೇಗನೆ ಔಟ್ ಮಾಡುವುದು ನಮ್ಮ

ಉದ್ದೇಶವಾಗಿತ್ತು. ಅದಕ್ಕಾಗಿಯೇ ಯೋಜನೆ ರೂಪಿಸಿಕೊಂಡಿದ್ದೆವು. ಬಹುಬೇಗನೆ ಅದಕ್ಕೆ ತಕ್ಕ ಫಲ ದೊರೆತಿದ್ದಕ್ಕೆ ಖುಷಿಯಾಯಿತು ಎಂದಿರುವ ಉಮೇಶ್, ದೈಹಿಕ ಸಕ್ಷಮತೆ
ಕಾಪಾಡಿಕೊಳ್ಳುವಲ್ಲಿ ಮತ್ತು ಯೋಜನೆ ರೂಪಿಸಿದಂತೆ ದಾಳಿ ಮಾಡುವಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತಿದ್ದು, ಅದರಿಂದ ಉತ್ತಮ ಬೌಲರ್ ಆಗಿ ರೂಪುಗೊಳ್ಳಬಹುದು ಎಂದರು. ನಾಯಕ ಗೌತಮ್ ಗಂಭೀರ್ ಸಹ ಉಮೇಶ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸನ್‍ರೈಸರ್ಸ್ ವಿರುದ್ಧ ಗೆಲವು ದಾಖಲಿಸಲು ಅವರೇ ಕಾರಣರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com