
ಶಿಲಾಂಗ್: ಪಂದ್ಯದ ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿದರೂ ಎರಡನೇ ಅವಧಿಯಲ್ಲಿ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ಬಿಟ್ಟುಕೊಟ್ಟ ಬೆಂಗಳೂರು ಎಫ್ ಸಿ, ಶಿಲಾಂಗ್ ಲಾಜಾಂಗ್ ವಿರುದ್ಧದ ಐ-ಲೀಗ್ ಪಂದ್ಯದಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ1-1 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿತು. ಈ ಮೂಲಕ ಉಭಯ ತಂಡಗಳು ತಲಾ 1ಅಂಕಗಳನ್ನು ಹಂಚಿಕೊಂಡವು.ಪ್ರಸಕ್ತ ಸಾಲಿನ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಕೆಯ ಪ್ರದರ್ಶನ ನೀಡಿದೆ. ಈಗ ಗೆಲುವಿನೊಂದಿಗೆ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ 32 ಅಂಕಗಳೊಂದಿಗೆ ಮೋಹನ್ ಬಗಾನ್ ತಂಡದೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದೆ.
ಪಂದ್ಯದ ಮೊದಲ ಅವಧಿಯ 45ನೇ ನಿಮಿಷದಲ್ಲಿ ಸ್ಟ್ರೈಕರ್ ಸೀನ್ ರೂನಿ ಬೆಂಗಳೂರು ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಇನ್ನು ಪಂದ್ಯದ ದ್ವಿತೀಯಾರ್ಧದಲ್ಲಿ ಎಚ್ಚೆತ್ತುಕೊಂಡ ಶಿಲಾಂಗ್ 63ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿತು. ಈ ಗೋಲು ಗಳಿಸಿದ್ದು ಉಲಿಯಮ್ಸ್.
Advertisement