ವ್ಯರ್ಥವಾದ ಜಾದವ್ ಆಟ

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ನಂತರ ಖಿಂಟಾನ್ ಡಿಕಾಕ್ (50) ಮತ್ತು ಕೇದಾರ್ ಜಾದವ್ (ಅಜೇಯ 63) ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ....
ಕೇದಾರ್ ಜಾದವ್
ಕೇದಾರ್ ಜಾದವ್

ರಾಯ್ ಪುರ: ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ನಂತರ ಖಿಂಟಾನ್ ಡಿಕಾಕ್ (50) ಮತ್ತು ಕೇದಾರ್ ಜಾದವ್ (ಅಜೇಯ 63) ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ಡೇವಿಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ರನ್ ಗಳಿಂದ ಸೋಲು ಅನುಭವಿಸಿದೆ.
ಶನಿವಾರ ನಡೆದ ಪಂದ್ಯದಲ್ಲ ಟಾಸ್ ಗೆದ್ದ ಸನ್ ರೈಸರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್ ಗಳಲ್ಲಿ 4 ವಿಕೆಟ್ ಗೆ 163 ರನ್ ದಾಖಲಿಸಿತು.  ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನಿಂದ ಡೆವಿಲ್ಸ್ ಪಡೆ ಟೂರ್ನಿಯಿಂದ ಹೊರ ಬಿದ್ದಂತಾಗಿದೆ.
ಆಸರೆಯಾದ ಹೆನ್ರಿಕ್ಸ್ : ಮೊದಲು ಬ್ಯಾಟಿಂಗ್ ಮಾಡಲಿಳಿದ ಸನ್ ರೈಸರ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ಮೊಯ್ಸಿಸ್ ಹೆನ್ರಿಕ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದರು. ಹೆನ್ರಿಕ್ಸ್ 46 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 74 ರನ್ ದಾಖಲಿಸಿದರು. ಈ ಮೂಲಕ ತಂಡ ಪೈಪೋಟಿ ಮೊತ್ತ ಕಲೆ ಹಾಕಿತು.
ಜಾಧವ್ ಹೋರಾಟ ವ್ಯರ್ಥ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಡೆವಿಲ್ಸ್ ಆರಂಭದಲ್ಲಿ ಖಿಂಟಾನ್ ಡಿ ಕಾಕ್ ಅವರ ಅರ್ಧ ಶತಕದ ಹೊರತಾಗಿಯೂ ಕುಸಿತ ಕಂಡಿತು.
ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರು. ಕಾಕ್ ವಿಕೆಟ್ ಬಿದ್ದ ಬೆನ್ನಲ್ಲೇ ಡುಮಿನಿ 12, ಯುವರಾಜ್ 2ರನ್ ಗಳಿಸಿ, ಔಟಾಗಿದ್ದು ತಂಡದ ಹಿನ್ನೆಡೆಗೆ ಕಾರಣವಾಯಿತು. 5ನೇ ವಿಕೆಟ್ ಜತೆಯಾದ ಕೇದಾರ್ ಜಾದವ್ ಹಾಗೂ ಸೌರಭ್ ತಿವಾರಿ 91 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕರೆದೊಯ್ಯುವ ಪ್ರಯತ್ನ ನಡೆಸಿದರಾದ್ರೂ ಯಶಸ್ವಿಯಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com