ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಮತ್ತು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್
ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಮತ್ತು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್

ಉಭಯ ದೇಶಗಳ ಸರಣಿಗೆ ಬಿಸಿಸಿಐ ಒಪ್ಪಿಗೆ: ಪಿಸಿಬಿ ಅಧ್ಯಕ್ಷ ಶಹರ್ಯಾರ್ ಶ್ರಮ ಸಾರ್ಥಕ

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಬಾಂಧವ್ಯದ ಪುನರಾರಂಭಕ್ಕೆ ಬಿಸಿಸಿಐ ಸಮ್ಮತಿ ನೀಡಿದೆ....
Published on

ಕೋಲ್ಕೋತಾ: ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಬಾಂಧವ್ಯದ ಪುನರಾರಂಭಕ್ಕೆ ಬಿಸಿಸಿಐ ಸಮ್ಮತಿ ನೀಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ  ಶಹರ್ಯಾರ್ ಖಾನ್ ನಡುವಣ ಮಾತುಕತೆ ಯಶಸ್ವಿಯಾಗಿದ್ದು, ಉಭಯ ದೇಶಗಳ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಲು ದಾಲ್ಮಿಯಾ ಒಪ್ಪಿದ್ದಾರೆ. ಈ ಸಂಬಂಧ ಶೀಘ್ರವೇ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು, ಸರಣಿಯ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದು ದಾಲ್ಮಿಯಾ ಅಶ್ವಾಸನೆ ನೀಡಿದ್ದಾರೆ.
ಪ್ರಯತ್ನಕ್ಕೆ ಸಿಕ್ಕ ಫಲ
ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಲು ಪಿಸಿಬಿ ಅತೀವ ಆಶಯ ಹೊಂದಿತ್ತು. ಈ ಹಿನ್ನೆಲೆಯಲ್ಲಿ, ಕೆಲ ವರ್ಷಗಳಿಂದ ಅದು ಬಿಸಿಸಿಐಯನ್ನು ಸರಣಿ ಆರಂಭಿಸುವಂತೆ ಒತ್ತಾಯಿಸುತ್ತಿತ್ತು. ಕಳೆದ ಕೆಲವು ವಾರಗಳಿಂದ ಈ ಪ್ರಯತ್ನಗಳು ತುಸು ಬಿರುಸುಪಡೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಶಹರ್ಯಾರ್ ಖಾನ್ ಅವರು ಭಾನುವಾರ ಕೋಲ್ಕೋತಾಕ್ಕೆ ಆಗಮಿಸಿ ದಾಲ್ಮಿಯಾ ಜೊತೆ ಮಾತುಕತೆ ನಡೆಸಿದರು.
8 ವರ್ಷಗಳಲ್ಲಿ 5 ಸರಣಿ: ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಶಹರ್ಯಾರ್ ಖಾನ್ ಮುಂದಿನ ಎಂಡು ವರ್ಷಗಳಲ್ಲಿ ಐದು ಸರಣಿಗಳನ್ನು ನಡೆಸಲು ಬಿಸಿಸಿಐ ಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು. ಈ ಐದು ಸರಣಿಗಳಲ್ಲಿ ಮೊದಲ ಸರಣಿಯು ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ ಎಂದು ಅವರು ತಿಳಿಸಿದರು. ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಪುನರುತ್ಥಾನಗೊಳಿಸುವುದು ಉಭಯ ದೇಶಗಳ ಕ್ರಿಕೆಟ್ ರಂಗಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿನ ಕ್ರಿಕೆಟ್ ರಂಗಕ್ಕೂ ಇದಿ ಮಹತ್ವದ್ದು ಎಂದು ಅವರು ತಿಳಿಸಿದರು.
ಅದೇ ಕಡೇ ಸರಣಿ: 2008 ರಲ್ಲಿ ಮುಂಬೈ ದಾಳಿ ನಡೆದ ನಂತರ, ಭಾರತ ಹಾಗೂ ಪಾಕಿಸ್ತಾನ  ನಡುವೆ ಯಾವುದೇ ಕ್ರಿಕೆಟ್ ಸರಣಿ ನಡೆದಿರಲಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ 2012-13 ಋತುವಿನಲ್ಲಿ ಉಭಯ ದೇಶಗಳ ಬಗ್ಗೆ ಸರಣಿ ನಡೆದಿತ್ತು. ಆ ವರ್ಷ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ ತಂಡ, ಇಲ್ಲಿ ಮೂರು ಪಂದ್ಯಗಳ ಟಿ-20 ಸರಣಿ ಆಡಿತ್ತು. ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದಿದ್ದ ಪಾಕಿಸ್ತಾನ, ಟಿ20 ಸರಣಿಯನ್ನು 1-1 ಸಮಬಲದಲ್ಲಿ ಡ್ರಾ ಮಾಡಿಕೊಂಡಿತ್ತು. ಅಲಿಲಂದ ಇಲ್ಲಿಯವರೆಗೂ ಯಾವುದೇ ಸರಣಿ ನಡೆದಿಲ್ಲ.
ಪಿಸಿಬಿಗೆ ಸರಣಿ ಅವಶ್ಯಕ: ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಕ್ರಿಕೆಟ್ ಸರಣಿಯನ್ನು ಪುನಃ ಪುನರಾರಂಭಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ಆಸಕ್ತಿ ವಹಿಸಿತ್ತು. ಹಣವಿಲ್ಲದೇ ಒದ್ದಾಡುತ್ತಿರುವ ಪಿಸಿಬಿಗೆತನ್ನ ಖಾಲಿಯಾಗುತ್ತಿರುವ ಖಜಾನೆಯನ್ನು ತುಂಬಲು ಭಾರತ ಪಾಕಿಸ್ತಾನ ಸರಣಿ ನಡೆಸುವ ಮಹಾದಾಸೆಯನ್ನು ಹೊಂದಿತ್ತು. ಮುಂಬೈ ದಾಳಿಯಾದ ನಂತರ ಭಾರತಕ್ಕೆ ಬಂದು ಒಂದು ಸರಣಿಯನ್ನು  ಆಡಿದ್ದು ಬಿಟ್ಟರೆ ಅಲ್ಲಿಂದ ಅಲ್ಲಿಂದ ಇಲ್ಲಿಯವರೆಗೂ ಉಭಯ ದೇಶಗಳ ನಡುವೆ ಮತ್ಯಾವ ಸರಣಿ ನಡೆದಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com