ಬೆಳ್ಳಿ ತೆರೆಗೆ ಬರಲಿದೆ ವಿಶ್ವಕಪ್ ಜಯದ ಇತಿಹಾಸ

ಭಾರತೀಯ ಕ್ರಿಕೆಟ್‍ನ ದಿಕ್ಕನ್ನೇ ಬದಲಿಸಿದ 1983ರ ಏಕದಿನ ವಿಶ್ವಕಪ್ ಗೆಲುವನ್ನು ಬೆಳ್ಳಿ ತೆರೆಯ ಮೇಲೆ ತರುವ ಪ್ರಯತ್ನ ಈಗ ಬಾಲಿವುಡ್‍ನಲ್ಲಿ ಆರಂಭವಾಗಿದೆ.
ಕಪಿಲ್ ದೇವ್
ಕಪಿಲ್ ದೇವ್
Updated on

ನವದೆಹಲಿ: ಭಾರತೀಯ ಕ್ರಿಕೆಟ್‍ನ ದಿಕ್ಕನ್ನೇ ಬದಲಿಸಿದ 1983ರ ಏಕದಿನ ವಿಶ್ವಕಪ್ ಗೆಲುವನ್ನು ಬೆಳ್ಳಿ ತೆರೆಯ ಮೇಲೆ ತರುವ ಪ್ರಯತ್ನ ಈಗ ಬಾಲಿವುಡ್‍ನಲ್ಲಿ ಆರಂಭವಾಗಿದೆ. ಕ್ರೀಡೆಗೆ ಸಂಬಂಧಿಸಿದ ಚಿತ್ರಕತೆಯನ್ನು ಬಳಸಿಕೊಂಡು ಸಾಕಷ್ಟು ಯಶಸ್ಸು ಗಳಿಸಿರುವ ಬಾಲಿವುಡ್ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾಗಿರುವ ಸಂಜಯï ಪುರನ್ ಸಿಂಗ್ ಚೌಹಾಣ್, 1983ರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ವಿಜಯದ ಹಾದಿಯನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ 2016ರ ಆರಂಭದಲ್ಲಿ ಶುರುವಾಗಲಿದೆ.  ಚಿತ್ರಕ್ಕೆಶೀರ್ಷಿಕೆ ಅಂತಿಮವಾಗಿಲ್ಲ. ನಾವು ಚಿತ್ರದ ಪೂರ್ವತಯಾರಿ ಹಂತದಲ್ಲಿದ್ದು, ಮುಂದಿನ ವರ್ಷಾರಂಭದಲ್ಲಿ ಶೂಟಿಂಗ್ ಆರಂಭವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ಮಾಪಕ ವಿಷ್ಣುವರ್ಧನ್ ಇಂಧೂರಿ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ವಿದೇಶಿ ತಂತ್ರಜ್ಞರು ಕಾರ್ಯ ನಿರ್ವಹಿಸಲಿದ್ದು, ಚಿತ್ರದ ಪ್ರಮುಖ ಪಾತ್ರಕ್ಕೆ ಶೀಘ್ರವೇ ಆಡಿಷನ್ ನಡೆಯಲಿದೆ ಎಂದಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟರು ಕಾಣಿಸಿಕೊಳ್ಳುತ್ತಾರೊ ಅಥವಾ ಹೊಸಬರನ್ನು ಪರಿಚಯಿಸಲಾಗುತ್ತದೊ ಎಂಬುದರ ಬಗ್ಗೆ ಈಗಲೇ ಮಾಹಿತಿ ನೀಡಲಾಗದು. ಪರಿಸ್ಥಿತಿಗೆ ತಕ್ಕಂತೆ ಇದು ನಿರ್ಧಾರವಾಗುತ್ತದೆ. ಪಾತ್ರಕ್ಕೆ ಯಾರು ಸೂಕ್ತವಾಗಿರುತ್ತಾರೊ ಅವರಿಗೆ ಅವಕಾಶ ದೊರೆಯಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com