
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡಿನ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ನಾಟ್‌ವೆಸ್ಟ್ ಟಿ20 ಬ್ಲಾಸ್ಟ್ ಕೂಟದಲ್ಲಿ ನಾಟಿಂಗಂಶೈರ್ ತಂಡದ ಪರ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.
142 ರನ್ ಗುರಿ ಬೆನ್ನಟ್ಟಿದ ನಾಟಿಂಗಂಶೈರ್ ತಂಡವು ಹೇಲ್ಸ್‌ಅವರ ಭರ್ಜರಿ ಆಟದಿಂದಾಗಿ ಇನ್ನೂ 33 ಎಸೆತ ಬಾಕಿ ಇರುತ್ತಲೇ ಜಯ ಸಾಧಿಸಿತು. ಅಲೆಕ್ಸ್ 43 ಎಸೆತಗಳಿಂದ 86 ರನ್ ಗಳಿಸಿ ಅಜೇಯರಾಗಿ ಉಳಿದರು.
ಬಾಯ್ಡ ರ್‍ಯಾಂಕಿನ್ ಮತ್ತು ಅತೀಕ್ ಜಾವಿದ್ ಎಸೆದ 11 ಮತ್ತು 12ನೇ ಓವರಿನ ನಡುವೆ ಹೇಲ್ಸ್ ಸತತ ಆರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಸಂಭ್ರಮಿಸಿದರು ಮತ್ತು ಈ ಸಾಧನೆಗೈದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಭಾರತದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಸಹ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ.
Advertisement