
ಬೆಂಗಳೂರು: ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿ ಮಳೆಯ ಅಡ್ಡಿ ಇದ್ದರೂ ತನ್ನ ಆಕ್ರಮಣಕಾರಿ ಪ್ರದರ್ಶನದ ಮೂಲಕ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈಗ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ವಿರುದ್ಧ ಸೆಣಸಲು ಸಜ್ಜಾಗಿ ನಿಂತಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಆರ್‍ಸಿಬಿ ಗೆಲವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿ ಕಾಣಿಸಿಕೊಳ್ಳುವತ್ತ ಗಮನ ಹರಿಸಿದೆ.
ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಜಯ ಹಾಗೂ 5ರಲ್ಲಿ ಸೋಲು, 1 ಪಂದ್ಯ ಫಲಿತಾಂಶ
ಪಡೆಯದ ಹಿನ್ನೆಲೆಯಲ್ಲಿ 15 ಅಂಕಗಳನ್ನು ಹೊಂದಿದೆ. ಈಗ ತನ್ನ ಕಡೇಯಲೀಗ್ ಪಂದ್ಯದಲ್ಲಿ ಗೆದ್ದರೆ, ಆರ್‍ಸಿಬಿ 17 ಅಂಕಕ್ಕೆ ತಲುಪಲಿದೆ. ಟೂರ್ನಿಯಲ್ಲಿ ಅತ್ಯುತ್ತಮ ರನ್‍ರೇಟ್ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಆರ್‍ಸಿಬಿ ಮೊದಲ ಅಥವಾ ಎರಡನೇ ಸ್ಥಾನ ಪಡೆಯಲಿದೆ. ಒಂದುವೇಳೆ ಆರ್‍ಸಿಬಿ ಪಂದ್ಯದಲ್ಲಿ ಸೋತರೆ, ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಬೇರೆ ತಂಡಗಳ ಪ್ರದರ್ಶ ನದ ಮೇಲೆ ಅವಲಂಬಿತ ವಾಗಬೇಕಾಗುತ್ತದೆ. ಡೆಲ್ಲಿ ಡೇರ್‍ಡೆವಿಲ್ಸ್ ತಂಡ ಆಡಿರುವ 13 ಪಂದ್ಯ ಗಳಲ್ಲಿ 5ರಲ್ಲಿ ಗೆಲವು 8ರಲ್ಲಿ ಸೋಲನುಭವಿಸಿದ್ದು, 10 ಅಂಕ ಗಳನ್ನು ಸಂಪಾದಿಸಿದೆ. ಟೂರ್ನಿಯಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ ಆದರೂ ಅಂತಿಮ ಪಂದ್ಯದಲ್ಲಿ ಗೆದ್ದು ಪಂದ್ಯಾವಳಿಗೆ ಗೆಲವಿನ ಗುಡ್ ಬೈ ಹೇಳಲು ತಂಡ ನಿರ್ಧರಿಸಿದೆ.
ಗೆದ್ದರೆ ಆರ್‍ಸಿಬಿಗೆ ಲಾಭ
ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಕ್ಕೆ ಪ್ಲೇ ಆಫ್ , ಸುತ್ತಿನಲ್ಲಿ ಹೆಚ್ಚಿನಅವಕಾಶವಿರುತ್ತದೆ. ಅಗ್ರ ಎರಡು ತಂಡಗಳು ಮೊದಲ ಕ್ವಾಲಿಫೈಯರ್‍ನಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಿಸುತ್ತದೆ. ಸೋತ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದಟಛಿ ಎರಡನೇ ಕ್ವಾಲಿ_Éೈಯರ್ ಪಂದ್ಯದಲ್ಲಿ ಆಡುವ ಅವಕಾಶ ಹೊಂದಿರುತ್ತದೆ. ಹಾಗಾಗಿ ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಲು ಆರ್‍ಸಿಬಿ ಗಮನ ಹರಿಸಿದೆ.
ಉತ್ತಮ ಲಯದಲ್ಲಿ ಬೆಂಗಳೂರು
ಕಳೆದೆರಡು ಆವೃತ್ತಿಗಳಲ್ಲಿ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವಲ್ಲಿ ಎಡವಿದ್ದ ವಿರಾಟ್ ಕೊಹ್ಲಿ ಪಡೆ, ಈ ಬಾರಿ ಗೆದ್ದು ತೀರಲೇಬೇಕೆಂಬ ಪಣ ತೊಟ್ಟಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದರೂ ನಂತರ ತವರಿನ ಅಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತು ಆಘಾತ ಅನುಭವಿಸಿತ್ತು. ಆನಂತರ ಗೆಲವಿನ ಲಯಕ್ಕೆ ಮರಳಿದ್ದ ಆರ್‍ಸಿಬಿ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡುಕೊಂಡಿತು. ಟೂರ್ನಿಯಲ್ಲಿ ಮಳೆಯಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದ ಆರ್‍ಸಿಬಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲವು ದಾಖಲಿಸಿ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡದಲ್ಲಿ ಕ್ರಿಸ್ ಗೇಯ್ಲ್ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ವಿಭಾಗದ ದೈತ್ಯ ತ್ರಿವಳಿಗಳಾಗಿದ್ದಾರೆ. ಉಳಿದಂತೆ ಮಂದೀಪ್ ಸಿಂಗ್, ಸರ್ಫರಾಜ್ ಖಾನ್ ಸಾಧಾರಣ ಪ್ರದರ್ಶನ ನೀಡಿದ್ದು, ದಿನೇಶ್ ಕಾರ್ತಿಕ್ ಇನ್ನಷ್ಟೇ ಫಾರ್ಮ್ ಕಂಡುಕೊಳ್ಳಬೇಕಿದೆ. ಬೌಲಿಂಗ್‍ನಲ್ಲಿ ಮಿಚೆಲ್ ಸ್ಟಾರ್ಕ್ ಪ್ರಮುಖರಾಗಿದ್ದಾರೆ. ಇನ್ನು ಎಸ್.ಅರವಿಂದ್ ಗಾಯಗೊಂಡಿರುವು ದು ತಂಡಕ್ಕೆ ಸ್ವಲ್ಪ ಹಿನ್ನಡೆ ತಂದಿದೆ. ಅವರಸ್ಥಾನ ತುಂಬಿದ್ದ ಅಶೋಕ್ ದಿಂಡಾ ಈ ಪಂದ್ಯದಲ್ಲಿ ಆಡುವರೇ ಅಥವಾ ವರುಣ್ ಅರುಣ್ ತಂಡಕ್ಕೆ ಮರಳುವರೇ ಎಂಬುದನ್ನು ಕಾದು ನೋಡಬೇಕು. ಉಳಿದಂತೆ ಹರ್ಷಲ್ ಪಟೇಲ್ ಮತ್ತು ಡೇವಿಡ್ ವೈಸ್ ಮಧ್ಯಮ ವೇಗಿಗಳಾಗಿದ್ದಾರೆ. ಯುಜ್ವೇಂದ್ರ ಚಾಹಲ್ ಸ್ಪಿನ್ ಜವಾ ಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಆತ್ಮ ವಿಶ್ವಾಸದಲ್ಲಿ ಡೆಲ್ಲಿ
ಸತತ ಸೋಲಿನ ನಂತರ ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ಪಡೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಭರ್ಜರಿ ಗೆಲವು ತಂಡದಲ್ಲಿ ಹೊಸ ಉತ್ಸಾಹತುಂಬಿದೆ. ಪಂದ್ಯದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದರೂ ಸಂಘಟಿತ ದಾಳಿ ಹಾಗೂ ಆಟಗಾರರ ಸ್ಥಿರ ಪ್ರದರ್ಶನದ ಕೊರತೆಯಿಂದ ತಂಡ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಜೆ.ಪಿ ಡುಮಿನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್ ಬ್ಯಾಟಿಂಗ್‍ನಲ್ಲಿ ಮಿಂಚಲಿಲ್ಲ. ಇನ್ನು ಬೌಲಿಂಗ್ ವಿಭಾಗದಲ್ಲಿ ಜಹೀರ್ ಖಾನ್ ತಂಡಕ್ಕೆ ಬಂದ ನಂತರ ಉತ್ತಮ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಕೌಲ್ಟರ್ ನೀಲ್, ಅಮಿತ್ ಮಿಶ್ರಾ, ಪರಿಣಾಮಕಾರಿಯಾಗಿಲ್ಲ.
ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಯ್ಲ್ , ಎಬಿ ಡಿವಿಲಿಯರ್ಸ್, ನಿಕ್ ಮ್ಯಾಡಿನ್ಸನ್, ಡೇವಿಡ್ ವೈಸ್, ಸೀನ್ ಅಬ್ಬಾಟ್, ರೀಲಿ ರೊಸ್ಸೊ, ಡಾರೆನ್ ಸಾಮಿ, ದಿನೇಶ್ ಕಾರ್ತಿಕ್, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಇಕ್ಬಾಲ್ ಅಬ್ದುಲ್ಲಾ, ಹರ್ಷಲ್ ಪಟೇಲ್, ವರುಣ್ ಅರುಣ್, ಶಿಶಿರ್ ಭವಾನೆ, ಶ್ರೀನಾಥ್ ಅರವಿಂದ್.
ಡೆಲ್ಲಿ ಡೇರ್‍ಡೆವಿಲ್ಸ್
ಜೀನ್ ಪಾಲ್ ಡುಮಿನಿ (ನಾಯಕ), ಮಯಾಂಕ್ ಅಗರ್‍ವಾಲ್, ಮನೋಜ್ ತಿವಾರಿ, ಕೇದಾರ್ ಜಾಧವ್, ಯುವರಾಜ್ ಸಿಂಗ್, ನಾಥನ್ ಕೌಲ್ಟರ್ ನೀಲ್, ಸಿ.ಎಂ ಗೌತಮ್, ಇರ್ಫಾನ್ ತಾಹೀರ್, ಶ್ರೇಯಸ್ ಅಯ್ಯರ್, ಜಹೀರ್ ಖಾನ್, ಆಂಜೆಲೊ ಮ್ಯಾಥ್ಯೂಸ್, ಅಮಿತ್ ಮಿಶ್ರಾ, ಅಲ್ಬಿ ಮಾರ್ಕೆಲ್, ಜಯದೇವ್ ಉನದ್ಕತ್.
ಸ್ಥಳ: ಬೆಂಗಳೂರು
ಮಳೆ ಸಾಧ್ಯತೆ
ಈ ಬಾರಿ ಟೂರ್ನಿಯಲ್ಲಿ ಆರ್‍ಸಿಬಿ ತಂಡ ಹೋದಲೆಲ್ಲಾ ಮಳೆ ಹಿಂಬಾಲಿಸಿದೆ ಎಂದು ಹೇಳಬಹುದು. ಶನಿವಾರ ಮಧ್ಯಾಹ್ನ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಭಾನುವಾರವು ಮಳೆ ಬೀಳುವ ಸಾಧ್ಯತೆಗಳಿವೆ. ಒಂದು ವೇಳೆ ಈ ಪಂದ್ಯ ಮಳೆಗೆ ರದ್ದಾದರೂ ಇತ್ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಳ್ಳಲಿವೆ. ಆರ್‍ಸಿಬಿಗೆ ಕನಿಷ್ಠ 1 ಅಂಕ ಸಿಕ್ಕರೂ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುತ್ತದೆ. ಆದರೆ, ಅಗ್ರ ಎರಡರಲ್ಲಿ ಸ್ಥಾನ ಪಡೆಯುವುದು ಅನುಮಾನವಾಗುತ್ತದೆ. ಹಾಗಾಗಿ ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದ ಫಲಿತಾಂಶ, ಆರ್‍ಸಿಬಿ ಯಾವ ಸ್ಥಾನ ಪಡೆಯಲಿದೆ ಎಂಬುದನ್ನು ನಿರ್ಧರಿಸುತ್ತದೆ.
Advertisement