
ಮುಂಬೈ: ಸಾರ್ವಜನಿಕವಾಗಿ ಅಸಮಂಜಸ ಹೇಳಿಕೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ದಂಡ ವಿಧಿಸಲಾಗಿದೆ.
ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 25 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಅನುಭವಿಸಿತ್ತು. ಈ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಆಟಗಾರ ಡ್ವೈನ್ ಸ್ಮಿತ್ ಎಲ್ ಬಿಗೆ ಬಲಿಯಾಗಿದ್ದರು. ಅಂಪೈರ್ ತೀರ್ಪು 'ಭಯಾನಕ ನಿರ್ಧಾರವಾಗಿತ್ತು ಎಂದು ಹೇಳಿದ್ದರು.
ಪರೋಕ್ಷವಾಗಿ ಅಂಪೈರ್ ತೀರ್ಪುನ್ನು ಪ್ರಶ್ನಿಸಿರುವ ಧೋನಿಗೆ, ಪಂದ್ಯದ ಒಟ್ಟು ಆದಾಯದಲ್ಲಿ ಶೇ. 10 ರಷ್ಟು ದಂಡವನ್ನು ವಿಧಿಸಲಾಗದೆ.
ಡ್ವೈನ್ ಸ್ಮಿತ್ ನಿರ್ಗಮದ ನಂತರ ತಂಡ ಮಾಧ್ಯಮ ಕ್ರಮಾಂಕದಲ್ಲಿ ಆವೇಗ ಕಳೆದುಕೊಂಡು ಸೋಲಿಗೆ ಕಾರಣವಾಗಿತ್ತು ಎಂದು ಹೇಳಿದ್ದರು. ಇದಕ್ಕೆ ಕೆಟ್ಟ ನಿರ್ಧಾರವೇ ಕಾರಣ ಎಂದು ಹೇಳಿದ್ದರು.
Advertisement