ಸಾಫ್ ಗೇಮ್ಸ್‌ಗೆ ಕೇರಳ ಸಜ್ಜು

ನ್ಯಾಷನಲ್ ಗೇಮ್ಸ್ ಗೆ ಆತಿಥ್ಯ ವಹಿಸಿದ ಬೆನ್ನಲ್ಲೇ ಕೇರಳ ಸೌತ್ ಏಷ್ಯನ್ ಫೆಡರೇಶನ್ ಗೇಮ್ಸ್ (ಸಾಫ್ ಗೇಮ್ಸ್)ಗೆ ಆತಿಥ್ಯ ವಹಿಸಲು ಸಜ್ಜಾಗಿದೆ...
ಸಾಫ್ ಗೇಮ್ಸ್ (ಸಾಂದರ್ಭಿಕ ಚಿತ್ರ)
ಸಾಫ್ ಗೇಮ್ಸ್ (ಸಾಂದರ್ಭಿಕ ಚಿತ್ರ)

ನವದೆಹಲಿ: ನ್ಯಾಷನಲ್ ಗೇಮ್ಸ್ ಗೆ ಆತಿಥ್ಯ ವಹಿಸಿದ ಬೆನ್ನಲ್ಲೇ ಕೇರಳ ಸೌತ್ ಏಷ್ಯನ್ ಫೆಡರೇಶನ್ ಗೇಮ್ಸ್ (ಸಾಫ್ ಗೇಮ್ಸ್)ಗೆ ಆತಿಥ್ಯ ವಹಿಸಲು ಸಜ್ಜಾಗಿದೆ. ಇಂದು ನಡೆದ ಸಭೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ 12ನೇ ಸಾಫ್ ಗೇಮ್ಸ್ ಕೇರಳದಲ್ಲಿ ನಡೆಸಲು ತೀರ್ಮಾನ ಕೈಗೊಂಡಿದೆ.

ಈ ವರ್ಷ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಸಾಫ್ ಗೇಮ್ಸ್ ನಡೆಯಲಿದೆ. ಈ ಬಗ್ಗೆ ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

ಕೇರಳದ ರಾಜಧಾನಿಯಾದ ತಿರುವನಂತಪುರದಲ್ಲಿ ಸಾಫ್‌ಗೇಮ್ಸ್  ನಡೆಯಲಿದೆ. 22 ಆಟಗಳು ಸಾಫ್ ಗೇಮ್ಸ್‌ನಲ್ಲಿ ಒಳಗೊಂಡಿದ್ದು, ಪ್ರಸ್ತುತ ಕ್ರೀಡಾಕೂಟ 12 ದಿನಗಳ ಕಾಲ ನಡೆಯಲಿದೆ.

ಭಾರತ ಸೇರಿದಂತೆ ಪಾಕಿಸ್ತಾನ್, ಶ್ರೀಲಂಕಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ್, ನೇಪಾಳ , ಭೂತಾನ್, ಮಾಲ್ಡೀವ್ಸ್ ಮೊದಲಾದ ದೇಶಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com