ಟೀಂ ಇಂಡಿಯಾ ಕೋಚ್: ಮೌನ ಮುರಿಯದ ಬಿಸಿಸಿಐ

ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಮಾಜಿ ನಾಯಕರಾದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರು ಹೆಸರುಗಳು ಕೇಳಿ ಬರುತ್ತಿವೆ...
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಮಾಜಿ ನಾಯಕರಾದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರು ಹೆಸರುಗಳು ಕೇಳಿ ಬರುತ್ತಿವೆ. ಇವರು ಟೀಂ ಇಂಡಿಯಾದ ಕೋಚ್ ಆಗುವ ಬಗ್ಗೆ ಬಿಸಿಸಿಐನಲ್ಲಿ ಚರ್ಚೆ ನಡೆಯುತ್ತಿವೆ ಎಂಬ ಊಹಾಪೋಹಗಳು ಪ್ರತಿ ದಿನ ಹರಿದಾಡುತ್ತಿದೆಯಾದರು, ಟೀಂ ಇಂಡಿಯಾಗೆ ಮುಂದಿನ ಗುರು ಯಾರು ಎಂಬುದರ ಬಗ್ಗೆ ಬಿಸಿಸಿಐ ಬಾಯಿ ಬಿಡುತ್ತಿಲ್ಲ.

ವಿಶ್ವಕಪ್ ನಂತರ ಭಾರತ ತಂಡದ ಕೋಚ್ ಹುದ್ದೆ ಖಾಲಿಯಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ನಲ್ಲಿ ಮುಳುಗಿದ್ದರೂ ಭಾರತ ತಂಡದ ಕೋಚ್ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಆದರೆ ಈ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಯಾವುದೇ ಸುಳುವು ನೀಡುತ್ತಿಲ್ಲ. ಬಿಸಿಸಿಐ ಸದ್ಯಕ್ಕೆ ಟೀಂ ಇಂಡಿಯಾ ಕೋಚ್ ಯಾರಾಗಬೇಕು ಎಂಬುದರ ಬಗ್ಗೆ ಆತುರ ಪಡುತ್ತಿಲ್ಲ ಎಂದು ಮಂಡಳಿಯ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.

ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಕೊಹ್ಲಿ ಹಾಗೂ ತಂಡದ ನಿರ್ದೇಶಕ ರವಿಶಾಸ್ತ್ರಿ ನಡುವೆ ಉತ್ತಮ ಹೊಂದಾಣಿಕೆ ಇದೆ. ಸದ್ಯಕ್ಕೆ ಬಿಸಿಸಿಐ ಕೋಚ್ ಬಗ್ಗೆ ಚಿಂತನೆ ನಡೆಸಿಲ್ಲ ಎಂದಿದ್ದಾರೆ. ಭಾರತ ತಂಡ ಕೋಚ್ ಆಗಿ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಹೆಸರು ಕೇಳಿ ಬಂದಿವೆಯಾದರೂ, ಭಾರತದ ಕೋಚ್ ಆಯ್ಕೆಯಾಗುವರೇ ಅಥವಾ ವಿದೇಶಿ ಕೋಚ್ ಬರುವರೆ ಎಂಬುದು ಸಹ ನಿರ್ಧಾರವಾಗಿಲ್ಲ. ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡದ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದರೂ ಕೋಚ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com