
ಲಾಹೋರ್: ತೀವ್ರ ಕುತೂಹಲ ಕೆರಳಿಸಿದ್ದ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‍ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆಗೆ ಆರಂಭಿಕ ಹ್ಯಾಮಿಲ್ಟನ್ ಮಸಕಜಾ ಭದ್ರ ಬುನಾದಿ ಹಾಕಿದರು. ಮತ್ತೊಬ್ಬ ಆರಂಭಿಕ ಆಟಗಾರ ಸಿಬಾಂಡ ಜೊತೆಗೆ ಅವರು 58 ರನ್ ಪೇರಿಸಿದರು. ಅವರ ನಂತರ, ಮಿಂಚಿದ ಮಧ್ಯಮ ಕ್ರಮಾಂಕದ ಚಿಗುಂಬುರಾ ಅವರ ಅರ್ಧಶತಕದ ಸಹಾಯದಿಂದ ಜಿಂಬಾಬ್ವೆ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್‍ಗಳ
ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಅಹ್ಮದ್ ಶೆಹಜಾದ್ ಹಾಗೂ ಮುಖ್ತಾರ್ ಅಹ್ಮದ್, ಮೊದಲ ವಿಕೆಟ್ ಗೆ 142 ರನ್ ಸೇರಿಸಿದರು. ಈ ಜೋಡಿ ಮುರಿದ ನಂತರ ಅನವಶ್ಯಕವಾಗಿ ವಿಕೆಟ್‍ಗಳು ಉರುಳಿದರೂ, ಪಾಕ್ 5 ವಿಕೆಟ್ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ 20 ಓವರ್‍ಗಳಲ್ಲಿ 6 ವಿಕೆಟ್‍ಗೆ 172
ಮಸಕಜಾ 43, ಚಿಗುಂಬುರಾ 54; ಬೌಲಿಂಗ್: ಮಹಮ್ಮದ್ ಸಮಿ 36ಕ್ಕೆ 3, ವಹಾಬ್ ರಿಯಾಜ್ 38ಕ್ಕೆ 2
ಪಾಕಿಸ್ತಾನ 19.3 ಓವರ್ ಗಳಲ್ಲಿ 5 ವಿಕೆಟ್‍ಗೆ 173
ಮುಖ್ತಾರ್ ಅಹ್ಮದ್ 83, ಅಹ್ಮದ್ ಶೆಹಜಾದ್ 55; ಕ್ರೆಮರ್ 23ಕ್ಕೆ 2. ಪಂದ್ಯಶ್ರೇಷ್ಠ: ಮುಖ್ತಾರ್
Advertisement