
ಕೇರಳ: ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವ ಕೇರಳದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಕ್ಕೆ(ಸಾಯ್) ಕ್ರೀಡಾಪಟುಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ತರಬೇತಿ ಪಡೆಯುತ್ತಿದ್ದ ಹಿರಿಯ ಅಥ್ಲೀಟ್ ಗಳು ನೀಡಿದ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾರೆ.
ತರಬೇತಿ ಪಡೆಯುತ್ತಿದ್ದ ಹಿರಿಯ ಅಥ್ಲೀಟ್ ಗಳು, ಮೃತ ಪಟ್ಟ ಅಥ್ಲೀಟ್ ಅರ್ಪಣಾ ರಾಮಚಂದ್ರನ್ ಸೇರಿದಂತೆ ತಮಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅವರ ಒಳ ಉಡುಪುಗಳನ್ನು ಒಗೆಯುವುದಕ್ಕೆ ಸೂಚಿಸುವುದಲ್ಲದೇ ಮಸಾಜ್ ಮಾಡಲು ಹೇಳುತ್ತಿದ್ದರು ಎಂದು ಆತ್ಮಹತ್ಯೆಗೆ ಯತ್ನಿಸಿದ ಅಥ್ಲೀಟ್ ಗಳು ಹೇಳಿಕೆ ನೀಡಿದ್ದಾರೆ.
ಹಿರಿಯ ಅಥ್ಲೀಟ್ ಗಳ ಕಿರುಕುಳದ ಬಗ್ಗೆ ವಾರ್ಡನ್ ಗೆ ದೂರು ನೀಡಿದ್ದರೂ, ಉತ್ತಮ ಭವಿಷ್ಯದ ದೃಷ್ಟಿಯಿಂದ ಕಿರುಕುಳವನ್ನು ಸಹಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಕಿರುಕುಳ ಮಿತಿ ಮೀರಿದಾಗ ತಡೆಯಲು ಸಾಧ್ಯವಾಗಲಿಲ್ಲ ಬೇರೆ ದಾರಿ ಕಾಣದೇ ಸಾಯುವ ನಿರ್ಧಾರ ಕೈಗೊಂಡೆವು ಎಂದು ಶಿಲ್ಪ ಕೆ ಆರ್, ತ್ರಿಷಾ ಜಾಕೋಬ್ ಸಬಿತಾ ಸಂತೋಷ್ ಹೇಳಿದ್ದು, ಕಿರುಕುಳದಿಂದ ಬೇಸತ್ತಿರುವ ತಾವು ಮತ್ತೆ ತರಬೇತಿ ಪಡೆಯಲು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ತರಬೇತುದಾರರು ಕಿರುಕುಳ ನೀಡಿಲ್ಲ ಎಂದು ಬಾಲಕಿಯರು ಸ್ಪಷ್ಟಪಡಿಸಿದ್ದಾರೆ.
Advertisement