ಐಪಿಎಲ್ ದಾಳಿ; ಬುಕ್ಕಿಗಳನ್ನು ಎಚ್ಚರಿಸಿದ್ದರೆ ಅಂತ ಪೊಲೀಸರ ವಿರುದ್ಧ ಕಠಿಣ ಕ್ರಮ: ಸಿಎಂ ಫಡ್ನವಿಸ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್‌) ಪಂದ್ಯಗಳಿಗೆ ಸಂಬಂಧಿಸಿದಂತೆ ಬುಕ್ಕಿಯೊಬ್ಬನ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ಮಾಡುವ ಮಾಹಿತಿಯನ್ನು ಆತನಿಗೆ ತಿಳಿಸಿದ್ದಾರೆ...
ದೇವೆಂದ್ರ ಫಡ್ನವಿಸ್
ದೇವೆಂದ್ರ ಫಡ್ನವಿಸ್

ಕೊಲ್ಹಾಪುರ/ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್‌) ಪಂದ್ಯಗಳಿಗೆ ಸಂಬಂಧಿಸಿದಂತೆ ಬುಕ್ಕಿಯೊಬ್ಬನ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ಮಾಡುವ ಮಾಹಿತಿಯನ್ನು ಆತನಿಗೆ ನೀಡಿ ಎಚ್ಚರಿಸಿದ್ದರೆ ಅಂತ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ಹಾವಳಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡುವ ಯೋಜನೆ ರೂಪಿಸಿತ್ತು. ದಾಳಿಗೆ ಮುನ್ನ ಇಂತಹ ಮಾಹಿತಿಯನ್ನು ಪೊಲೀಸ್‌ ಯಾರಿಗಾದರು ನೀಡಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಫಡ್ನವೀಸ್ ಅವರು ತಿಳಿಸಿದ್ದಾರೆ.

ಐಪಿಎಲ್‌ ಪಂದ್ಯಗಳ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಹವಾಲಾ ಹಾಗೂ ಹಣಲೇವಾದೇವಿ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ದೆಹಲಿ, ಮುಂಬೈ ಹಾಗೂ ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಶೋಧ ಕಾರ್ಯ ನಡೆಸಿತ್ತು.

ಮುಂಬೈ ಹೊರವಲಯದಲ್ಲಿರುವ ಠಾಣೆಯ ಉಲ್ಲಾಸನಗರದಲ್ಲಿ ಶಂಕಿತ ಬುಕ್ಕಿಯೊಬ್ಬ ದಾಳಿ ಮಾಹಿತಿ ಬೆನ್ನಲ್ಲೆ ತನ್ನ ಮೊಬೈಲ್‌ ಅನ್ನು ಕುಟುಂಬ ಸದಸ್ಯರಿಗೆ ನೀಡಿ ಆಸ್ಪತ್ತೆಗೆ ದಾಖಲಾಗಿದ್ದ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com