
ನವದೆಹಲಿ: ಶುಕ್ರವಾರ ವಿಶ್ವ ಬ್ಯಾಡ್ಮಿಂಟನ್ ನೂತನ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ಉದಯೋನ್ಮುಖ ಆಟಗಾರ್ತಿ ಪಿವಿ ಸಿಂಧು ಅವರು 2 ಸ್ಥಾನಗಳ ಕುಸಿತಕಂಡಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ಭಾರತದ ಸೈನಾ ನೆಹ್ವಾಲ್ ಅವರು 82342 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, 2ನೇ ಸ್ಥಾನದಲ್ಲಿ ಚೀನಾದ ಲೀ ಕ್ಸೆರುಯಿ ಮತ್ತು 3ನೇ ಸ್ಥಾನದಲ್ಲಿ ಸ್ಪಾನಿಷ್ ನ ಕೆರೋಲಿನಾ ಮರಿನ್ ಇದ್ದಾರೆ. ಇನ್ನು ಕಳೆದ ಬಾರಿ 12 ಸ್ಥಾನದಲ್ಲಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು 2 ಸ್ಥಾನಗಳ ಕುಸಿತಕಂಡು ಪ್ರಸ್ತುತ 14ನೇ ಸ್ಥಾನದಲ್ಲಿದ್ದಾರೆ. ಪಿವಿ ಸಿಂಧು ಒಟ್ಟು 49810 ಅಂಕಗಳನ್ನು ಗಳಿಸಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಚೀನಾದ ಚೆನ್ ಲಾಂಗ್ ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಚೀನಾದವರೇ ಆದ ಲಿನ್ ಡಾನ್ ಸ್ಥಾನ ಪಡೆದಿದ್ದಾರೆ. ಇನ್ನು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಡೆನ್ಮಾರ್ಕ್ ನ ಜಾನ್ ಒ ಜಾರ್ಗೆನ್ಸೆನ್ ಮತ್ತು ಭಾರತದ ಕೆ.ಶ್ರೀಕಾಂತ್ ಇದ್ದಾರೆ. ಶ್ರೀಕಾಂತ್ ಒಟ್ಟು 69164 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಕೊರಿಯಾದ ಲೀಯಾಂಗ್ ಡೇಯಿ ಮತ್ತು ಯೂಯಿಯಾನ್ ಸಿಯಾಂಗ್ ಅಗ್ರ ಸ್ಥಾನದಲ್ಲಿದ್ದಾರೆ.
Advertisement