ಏಷ್ಯನ್ ಅಥ್ಲೆಟಿಕ್ಸ್ ಗೆ ತಂಡ ಪ್ರಕಟ ಪೂವಮ್ಮ, ವಿಕಾಸ್‍ಗೌಡ ಆಯ್ಕೆ
ನವದೆಹಲಿ: ಮುಂದಿನ ತಿಂಗಳು ಚೀನಾದ ವುಹಾನ್ನಲ್ಲಿ ನಡೆಯಲಿರುವ 21ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗಾಗಿ ತೆರಳಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಎಂ.ಆರ್. ಪೂವಮ್ಮ ಅವರು ಸ್ಥಾನ ಪಡೆದಿದ್ದಾರೆ.
ಒಟ್ಟು 47 ಕ್ರೀಡಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಜೂ. 3ರಿಂದ 7ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಈ ತಂಡ ಪಾಲ್ಗೊಳ್ಳಲಿದೆ ಎಂದು ಐಬಿಎನ್ ಲೈವ್ ಜಾಲತಾಣ ವರದಿ ಮಾಡಿದೆ. ಭಾರತದ 4ಗಿ 400 ಮೀ. ರಿಲೇ ವಿಭಾಗದಲ್ಲಿ ಪೂವಮ್ಮ ಅವರು ಆಯ್ಕೆಯಾಗಿದ್ದು, ಈ ತಂಡದಲ್ಲಿ ಟಿಂಟು ಲೂಕಾ, ದೇಬಶ್ರೀ ಮಜುಂದಾರ್, ಜಿಸ್ನಾ ಮ್ಯಾಥ್ಯೂ, ಅಂಜು ಥಾಮಸ್ ಅವರಿದ್ದಾರೆ.
ಅಕ್ಕುಂಜಿ ಇಲ್ಲ: ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆ (ಟಿಒಪಿ)ಗೆ ಆಯ್ಕೆಯಾಗಿರುವ ಕರ್ನಾಟಕದ ಅಶ್ವಿನಿ ಅಕ್ಕುಂಜಿ ಹಾಗೂ ಮಂದೀಪ್ ಕೌರ್, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಎಎಫ್ ಮುಖ್ಯಸ್ಥ ಮನೀಶ್ ಕುಮಾರ್, ಅಶ್ವಿನಿ ಅಕ್ಕುಂಜಿ, ಮಂದೀಪ್ ಕೌರ್, ಸಿನಿ ಜೋಸ್, ಪ್ರಿಯಾಂಕಾ ಪನ್ವಾರ್, ಜೌನಾ ಮರ್ಮು ಅವರನ್ನು ಒಲಿಂಪಿಕ್ಸ್ಗಾಗಿ ತಯಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ