ಆದರೆ ಇದೆಲ್ಲಾ ವದಂತಿ ಎಂದು ಯುವರಾಜ್ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಬಂದ ಸುದ್ದಿ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಯುವಿ, ನನ್ನ ಪ್ರೀತಿಯ ಮಾಧ್ಯಮದವರೇ ನೀವೇ ನನ್ನ ಮದುವೆಯ ಜಾಗ ಮತ್ತು ಮದುವೆಯ ತಿಂಗಳನ್ನು ತೀರ್ಮಾನಿದ್ದೀರಿ. ಇನ್ನು ಮದುವೆಯ ದಿನ ಕೂಡಾ ಹೇಳಿ ಬಿಟ್ಟರೆ, ಸರಿಯಾದ ಸಮಯಕ್ಕೆ ನಾನು ರೆಡಿಯಾಗಿ ಬರುವೆ ಎಂದಿದ್ದಾರೆ.