ಆರ್ ಅಶ್ವಿನ್ (ಸಂಗ್ರಹ ಚಿತ್ರ)
ಆರ್ ಅಶ್ವಿನ್ (ಸಂಗ್ರಹ ಚಿತ್ರ)

ಮೊಹಾಲಿ ಟೆಸ್ಟ್: ದಾಖಲೆ ಬರೆದ ಅಶ್ವಿನ್

ಭಾರತ-ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ದಾಖಲೆಯೊಂದನ್ನು ಬರೆದಿದ್ದಾರೆ...

ಮೊಹಾಲಿ: ಭಾರತ-ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ದಾಖಲೆಯೊಂದನ್ನು  ಬರೆದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಅಶ್ವಿನ್ ಇಮ್ರಾನ್ ತಾಹಿರ್ ಅವರನ್ನು ಔಟ್ ಮಾಡುವ ಮೂಲಕ ತ್ವರಿತಗತಿಯಲ್ಲಿ 150 ವಿಕೆಟ್ ಗಳಿಸಿದ ಖ್ಯಾತಿಗಳಿಸಿದರು. ದಕ್ಷಿಣ   ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇಯ್ನ್ ಈ ಮೊದಲು ಈ ದಾಖಲೆ ಬರೆದಿದ್ದರು. ಇದೀಗ ಭಾರತದ ಆರ್ ಅಶ್ವಿನ್ ತಮ್ಮ 29 ಟೆಸ್ಟ್ ಪಂದ್ಯದಲ್ಲಿ 150 ವಿಕೆಟ್ ಪಡೆಯುವ ಮೂಲಕ ಆ  ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ತೊಂದು ದಾಖಲೆಯೆಂದರೆ ಈ 150 ವಿಕೆಟ್ ಗಳ ಪೈಕಿ ಅಶ್ವಿನ್ ತವರು ನೆಲ ಭಾರತದಲ್ಲಿಯೇ 100 ವಿಕೆಟ್ ಗಳಿಸಿದ್ದು, ಇದೂ ಕೂಡ ಒಂದು ದಾಖಲೆಯಾಗಿದೆ.

ಆ ಮೂಲಕ ಈ ಹಿಂದೆ ಭಾರತದ ಮಾಜಿ ಸ್ಪಿನ್ನರ್ ಇಎಎಸ್ ಪ್ರಸನ್ನ ಅವರು ಈ ದಾಖಲೆ ನಿರ್ಮಿಸಿದ್ದರು. ಇದೀಗ ಅಶ್ವಿನ್ ಈ ದಾಖಲೆಯನ್ನು ಮುರಿದಿದ್ದಾರೆ. ಪ್ರಸನ್ನ ಅವರು 34 ಪಂದ್ಯಗಳಲ್ಲಿ  150 ವಿಕೆಟ್ ಗಳಿಸಿದ್ದರು. ಈಗ ಅಶ್ವಿನ್ ಅವರು 29 ಪಂದ್ಯಗಳಲ್ಲಿ ಈ ಮೈಲಿಗಲ್ಲು ದಾಟಿ ಭಾರತದ ಮಟ್ಟಿಗೆ ದಾಖಲೆ ನಿರ್ಮಿಸಿದ್ದಾರೆ. ತ್ವರಿತಗತಿ ವಿಶ್ವದಾಖಲೆ ಪಟ್ಟಿಯಲ್ಲಿ ಇಂಗ್ಲೆಂಡಿನ ಸಿಡ್ನಿ ಬರ್ನ್ ಮೊದಲಿಗರಾಗಿದ್ದಾರೆ. ಅವರು 24 ಟೆಸ್ಟ್ ಗಳಲ್ಲಿ 150 ವಿಕೆಟ್ ಪಡೆದಿದ್ದರು.

ತ್ವರಿತಗತಿಯಲ್ಲಿ 150 ವಿಕೆಟ್ ಪಡೆದ ಬೌಲರ್ ಗಳು
1. ಸಿಡ್ನಿ ಬರ್ನ್ಸ್ (ಇಂಗ್ಲೆಂಡ್)-24 ಪಂದ್ಯ
2. ವಾಖರ್ ಯೂನಿಸ್ (ಪಾಕಿಸ್ತಾನ) -27 ಪಂದ್ಯ
3. ಕ್ಲಾರಿ ಗ್ರಿಮೆಟ್ (ಆಸ್ಟ್ರೇಲಿಯಾ)-28 ಪಂದ್ಯ
4. ಆರ್ ಅಶ್ವಿನ್ (ಭಾರತ) 29 ಪಂದ್ಯ
5. ಹ್ಯೂ ಟೇ ಫೀಲ್ಡ್ (ದಕ್ಷಿಣ ಆಫ್ರಿಕಾ) 29 ಪಂದ್ಯ
6. ಇಯಾನ್ ಬೋಥಂ (ಇಂಗ್ಲೆಂಡ್) 29 ಪಂದ್ಯ
7. ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ) 29 ಪಂದ್ಯ
8. ಸಯೀದ್ ಅಜ್ಮಲ್ (ಪಾಕಿಸ್ತಾನ) -29 ಪಂದ್ಯ
5. ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ)
6. ಶೇನ್ ವಾರ್ನ್ (ಆಸ್ಟ್ರೇಲಿಯಾ)
7. ಸ್ಟುವರ್ಟ್ ಮೆಗ್ ಗಿಲ್ (ಆಸ್ಟ್ರೇಲಿಯಾ)

Related Stories

No stories found.

Advertisement

X
Kannada Prabha
www.kannadaprabha.com