ಸ್ಪಿನ್ ಸುಳಿಯಲಿ ಬ್ಯಾಟಿಂಗ್ ತಿಣುಕಾಟ

ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಟೆಸ್ಟ್ ಸರಣಿಯ ಮೊದಲ ದಿನವೇ ಪ್ರಮುಖ 12 ವಿಕೆಟ್‌ಗಳು ಪತನ ಕಾಣುವುದರೊಂದಿಗೆ ಎಲ್ಲರ ಕೇಂದ್ರ ಬಿಂದುವಾಗಿದ್ದ ಪಿಚ್ ಮಹಿಮೆ ಮೊದಲ...
ಮುರಳಿ ವಿಜಯ್ ವಿಕೆಟ್ ಪಡೆದ ಖುಷಿಯಲ್ಲಿ ದ.ಆಫ್ರಿಕಾ ತಂಡದ ಆಟಗಾರರು
ಮುರಳಿ ವಿಜಯ್ ವಿಕೆಟ್ ಪಡೆದ ಖುಷಿಯಲ್ಲಿ ದ.ಆಫ್ರಿಕಾ ತಂಡದ ಆಟಗಾರರು

ಮೊಹಾಲಿ: ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಟೆಸ್ಟ್ ಸರಣಿಯ ಮೊದಲ ದಿನವೇ ಪ್ರಮುಖ 12 ವಿಕೆಟ್‌ಗಳು ಪತನ ಕಾಣುವುದರೊಂದಿಗೆ ಎಲ್ಲರ ಕೇಂದ್ರ  ಬಿಂದುವಾಗಿದ್ದ ಪಿಚ್ ಮಹಿಮೆ ಮೊದಲ ದಿನವೇ ಪ್ರಕಟವಾಗಿ, ಬ್ಯಾಟಿಂಗ್ ತಿಣುಕಾಡಿದೆ, ಅತಿಥೇಯ ತಂಡದ ಪರ ಮುರಳಿ ವಿಜಯ್ ಹಾಗೂ ದ.ಆಫ್ರಿಕಾ ಪರ ಸ್ಪಿನ್ನರ್ ಡೀನ್ ಎಲ್ಗಾರ್ ಮಿಂಚಿದ್ದು  ದಿನದ ವಿಶೇಷವೆನಿಸಿತು.

ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದಲ್ಲಿ ಶುರುವಾದ ಗಾಂಧಿ-ಮಂಡೇಲಾ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕವು ಮುರಳಿ ವಿಜಯ್ (75: 136 ಎಸೆತ , 12  ಬೌಂಡರಿ ) ದಾಖಲಿಸಿದ ಅರ್ಧಶತಕದ ನೆರವಿನೊಂದಿಗೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 68 ಓವರ್ ಗಳಲ್ಲಿ 201 ರನ್‌ಗೆ ಆಲೌಟ್ ಆದರೆ, ಇದಕ್ಕೆ ಪ್ರತಿಯಾಗಿ ದ.ಆಫ್ರಿಕಾ ಕೂ ಡ  20  ಓವರ್ ಗಳಲ್ಲಿ 28 ರನ್ ಗೆ 2 ವಿಕೆಟ್ ಕಳೆದುಕೊಂಡು ಚಡಪಡಿಸಿದೆ. ಸ್ಪಿನ್‌ಮಯವಾಗಿದ್ದ ಪಿಚ್‌ನ ಲಾಭ ಪಡೆದ ಡೀನ್ ಎಲ್ಗಾರ್ (22ಕ್ಕೆ 4) ತೋರಿದ ಚಾಣಾಕ್ಷ ಪ್ರದರ್ಶನದಿಂದ  ಆತಿಥೇಯರನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ದ.ಆಫ್ರಿಕಾ, ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಲು ಮುಂದಾದರೂ, ಅದರಲ್ಲಿ ವಿಫಲವಾಯಿತು. ಆರಂಭಿಕ ಸ್ಟಿಯಾನ್ ವಾನ್ ಜಿಲ್ (5) ಅವರನ್ನು ಆರ್.  ಅಶ್ವಿನ್ ಬಲಿಪಡೆದರೆ, ಸೀಮಿತ ಓವರ್‌ಗಳ ಸರಣಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದ ಫ್ಯಾಪ್ ಡು ಪ್ಲೆಸಿಸ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದ ರವೀಂದ್ರ ಜಡೇಜಾ, ಪ್ರವಾಸಿಗರನ್ನು ಒತ್ತಡಕ್ಕೆ  ಸಿಲುಕಿಸುವಲ್ಲಿ ಯಶಸ್ವಿಯಾದರು.

ದಿನದಾಂತ್ಯಕ್ಕೆ ಆರಂಭಿಕ ಡೀನ್ ಎಲ್ಗಾರ್ ಹಾಗೂ ನಾಯಕ  ಹಾಶೀಂ ಆಮ್ಲಾ ಕ್ರಮವಾಗಿ 13 ಮತ್ತು 9 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. 173 ರನ್ ಹಿನ್ನಡೆಯಲ್ಲಿರುವ  ಆಫ್ರಿಕಾ ತಂಡಕ್ಕೆ ಆಮ್ಲಾ,  ಎಲ್ಗಾರ್ ಹಾಗೂ ಡಿವಿಲಿಯರ್ಸ್ ಹೇಗೆ  ನೆರವಾಗುತ್ತಾರೆ ಎಂಬುದು ಕೂಡ ಅಷ್ಟೇ ಸ್ವಾರಸ್ಯಕರ ಎನಿಸಿದೆ.

ಕೊಹ್ಲಿ ಸಂಭ್ರಮ ಕಸಿದ ರಬಾಡ: ಇನ್ನು ಇಂದು ಬೆಳಿಗ್ಗೆ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ನಿರೀಕ್ಷಿತ ಜತೆಯಾಟ ಸಿಗದೆ ಭಾರತ ನಿರಂತರವಾಗಿ ವಿಕೆಟ್  ಕಳೆದುಕೊಂಡು ತಲ್ಲಣಿಸಿತು.  ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ವೇಗಿ ವೆರ್ನಾನ್ ಫ್ರಿಲಾಂಡರ್ ಬೌಲಿಂಗ್‌ನಲ್ಲಿ ಆರಂಭಿಕ ಶಿಖರ್ ಧವನ್ (0) ಬಾರಿಸಿದ ಚೆಂಡು ಮೊದಲ ಸ್ಲಿಪ್‌ನಲ್ಲಿದ್ದ ಆಮ್ಲಾ  ಕೈ ಸೇರಿತು. ನಂತರ ಬಂದ ಚೇತೇಶ್ವರ ಪೂಜಾರ (31) ಜತೆಗೆ ಮುರಳಿ ವಿಜಯ್ ಸೂಕ್ಷ್ಮಜ್ಞತೆಯಿಂದಲೇ ಬ್ಯಾಟಿಂಗ್ ನಡೆಸುತ್ತಾ ಸಾಗಿದರು. ಈ ಜೋಡಿಯನ್ನು ಭೋಜನ ವಿರಾಮಕ್ಕೂ ಮುನ್ನ  ಎಲ್ಗಾರ್ ಬೇರ್ಪಡಿಸಿದರು. ಜಾಗ್ರತೆಯಿಂದಲೇ ಬ್ಯಾಟ್ ಮಾಡುತ್ತಿದ್ದ ಪೂಜಾರರನ್ನು ಎಲ್ಗಾರ್ ಎಲ್‌ಬಿ ಬಲೆಗೆ ಬೀಳಿಸಿದರು. ವಿಜಯ್ ಮತ್ತು ಪೂಜಾರ 2ನೇ ವಿಕೆಟ್‌ಗೆ 63 ರನ್ ಕಾಣಿಕೆ  ನೀಡಿದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ (1) ವೇಗಿ ರಬಾಡ ಬೌಲಿಂಗ್‌ನಲ್ಲಿ ಎಲ್ಗಾರ್‌ಗೆ ಕ್ಯಾಚಿತ್ತು ಹೊರಬೀಳುತ್ತಿದ್ದಂತೆ ಭಾರತ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಗುರುವಾರವಷ್ಟೇ  ೨೭ನೇ ವಸಂತಕ್ಕೆ ಕಾಲಿರಿಸಿದ ಕೊಹ್ಲಿಯ ಹುಟ್ಟುಹಬ್ಬದ ಸಂಭ್ರಮವನ್ನು ರಬಾಡ ಕಸಿದುಕೊಂಡರು.

ಕೈ ಹಿಡಿದ ಮುರಳಿ ಅರ್ಧಶತಕ: ಭೋಜನ ವಿರಾಮದ ಹೊತ್ತಿಗೆ 82 ರನ್‌ಗಳಿಗೆ 3 ವಿಕೆಟ್ ಕಳೆದು ಕೊಂಡ ಭಾರತ, ಆನಂತರ ಇನ್ನಷ್ಟು ತಡವರಿಸಿತು. ಅಜಿಂಕ್ಯ ರಹಾನೆ (15), ವೃದ್ಧಿಮಾನ್  ಸಾಹ (0) ಅವರನ್ನು ಕಾಡಿದ ಎಲ್ಗಾರ್ ಮತ್ತೆ ಪ್ರವಾಸಿ ತಂಡದ ಕೈಮೇಲಾಗುವಂತೆ ನೋಡಿಕೊಂಡರು. ಈ ಹಂತದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಾ ಸಾಗಿದ್ದ ಮುರಳಿ ವಿಜಯ್ ಯಶಸ್ವಿ  ಅರ್ಧಶತಕ ಪೂರೈಸಿ ತಂಡದ ನೆರವಿಗೆ ಧಾವಿಸಿದರೂ, ಅವರು ಕೂಡ ಆಫ್ ಸ್ಪಿನ್ನರ್ ಸೈಮನ್ ಕೈಚಳಕಕ್ಕೆ ಸಿಲುಕಿ ಕ್ರೀಸ್ ತೊರೆದರು. ಆ ಬಳಿಕ ಆಲ್‌ರೌಂಡರ್  ರವೀಂದ್ರ ಜಡೇಜಾ (38)  ಮತ್ತು ಆರ್. ಅಶ್ವಿನ್ ಜೋಡಿ. ೮ನೇ ವಿಕಟ್ ಗೆ 42 ರನ್ ಗಳನ್ನು ಕಲೆಹಾಕಿ ಭಾರತ  200 ರನ್‌ಗಳ ಗಡಿ ದಾಟುವಂತೆ ಈ ಜೋಡಿ ನೋಡಿಕೊಂಡಿತು.

ಪಿಚ್ ಬಗ್ಗೆ ಎಲ್ಗಾರ್ ಅಸಮಾಧಾನ: ನಾಲ್ಕು ವಿಕೆಟ್ ಕಬಳಿಸಿ  ಹೂ gತ ಗಿಯೂ ಡೀನ್ ಎಲ್ಗಾರ್ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ವಿರುದ್ಧ ಬೇಕೆಂದಲೇ ಭಾರತ  ಈ  ರೀತಿಯಾದ ಸ್ಪಿನ್ ಪಿಚ್ ನಿರ್ಮಿಸಿದ್ದು, ಸಾಕಷ್ಟು ಕಠಿಣ ಸವಾಲು ನಮಗೆ ಎದುರಾಗಲಿದೆ. ಇದು ಕೇವಲ ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

ಕೊಹ್ಲಿಗೆ ಶುಭಾಶಯ
ತಮ್ಮ ಹುಟ್ಟುಹಬ್ಬದಂದೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಸಿದ್ಧವಾಗಿದ್ದ ವಿರಾಟ್ ಕೊಹ್ಲಿಗೆ, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಒಕ್ಕೊರಲಾಗಿ ಶುಭಾಷಯ ಕೋರಿದರು. 27ನೇ ವಸಂತಕ್ಕೆ  ಕಾಲಿಟ್ಟ ಟೀಂ ಇಂಡಿಯಾ ನಾಯಕನಿಗೆ ‘ಹ್ಯಾಪಿ ಬರ್ತಡೇ ಟೂ ಯೂ ಕೊಹ್ಲಿ’ ಅಂತ ಅಭಿಮಾನಿಗಳು ರಾಗವಾಗಿ ಹೇಳಿದರು.

ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್

68 ಓವರ್‍ಗಳಲ್ಲಿ 201
ಮುರಳಿ ವಿಜಯಯ್ ಎಲ್‍ಬಿ ಬಿ ಹಾರ್ಮರ್ 75
ಶಿಖರ್ ಧವನ್ ಸಿ ಆಮ್ಲಾ ಬಿ ಫಿಲಾಂಡರ್ 00
ಚೇತೇಶ್ವರ ಪೂಜಾರ ಎಲ್‍ಬಿ ಬಿ ಎಲ್ಗರ್ 31
ವಿರಾಟ್ ಕೊಹ್ಲಿ ಸಿ ಎಲ್ಗರ್ ಬಿ ರಬಾಡ 01
ಅಜಿಂಕ್ಯ ರಹಾನೆ ಸಿ ಆಮ್ಲಾ ಬಿ ಎಲ್ಗರ್ 15
ವೃದ್ಧಿಮಾನ್ ಸಾಹಾ ಸಿ ಆಮ್ಲಾ ಬಿ ಎಲ್ಗರ್ 00
ರವೀಂದ್ರ ಜಡೇಜಾ ಎಲ್‍ಬಿ ಬಿ ಫಿಲಾಂಡರ್ 38
ಅಮಿತ್ ಮಿಶ್ರಾ ಸಿ ಸ್ಟೇನ್ ಬಿ ಎಲ್ಗರ್ 06
ಆರ್. ಅಶ್ವಿನ್ ಅಜೇಯ 20
ಯಾದವ್ ಬಿ ಇಮ್ರಾನ್ ತಾಹಿರ್ ಬಿ 05
ವರುಣ್ ಏರಾನ್ ಬಿ ಇಮಾ್ರನ್ ತಾಹಿರ್ 00
ಇತರೆ: (ಬೈ-6, ಲೆಬೈ-1, ನೋಬಾಲ್-3) 10
ವಿಕೆಟ್ ಪತನ: 1-0 (ಧವನ್), 2-63 (ಪೂಜಾರ), 3-65 (ಕೊಹ್ಲಿ), 4-102 (ರಹಾನೆ), 5-102 (ಸಾಹ), 6-140 (ವಿಜಯ್), 7-154 (ಮಿಶ್ರಾ), 8-196 (ಜಡೇಜಾ), 9-201 (ಉಮೇಶ್), 10-201 (ಏರಾನ್)
ಬೌಲಿಂಗ್ ವಿವರ: ಡೇಲ್‍ಸ್ಟೇನ್ 11-3-30-0, ವೆರ್ನಾನ್ ಫಿಲಾಂಡರ್ 15-5-38-2, ಸೈಮನ್ ಹಾರ್ಮರ್ 14-1-51-1, ಕಾಗಿಸೊ ರಬಾಡ 10-0-30-1, ಡೀನ್ ಎಲ್ಗಾರ್ 8-1-22-4,
ಇಮ್ರಾನ್ ತಾಹಿರ್ 10-3-23-2 ದ.ಆಫ್ರಿಕಾ ಮೊದಲ ಇನ್ನಿಂಗ್ಸ್ 20 ಓವರ್‍ಗಳಲ್ಲಿ 2 ವಿಕೆಟ್‍ಗೆ 28 ಡೀನ್ ಎಲ್ಗಾರ್ ಬ್ಯಾಟಿಂಗ್ 13 ಸ್ಟಿಯಾನ್ ವಾನ್ ಜಿಲ್ ಎಲ್‍ಬಿ ಬಿ ಅಶ್ವಿನ್ 05
ಫ್ಯಾಪ್ ಡು ಪ್ಲೆಸಿಸ್ ಬಿ ರವೀಂದ್ರ ಜಡೇಜಾ 00 ಹಾಶೀಂ ಆಮ್ಲಾ ಬ್ಯಾಟಿಂಗ್ 09
ಇತರೆ: (ಲೆಬೈ-1) 01
ವಿಕೆಟ್ ಪತ-ನ: 1-9 (ವಾನ್ ಜಿಲ್), 2-9 (ಡುಪ್ಲೆಸಿಸ್)
ಬೌಲಿಂಗ್ ವಿವ-ರ: ಆರ್. ಅಶ್ವಿನ್,7-3--4--1, ಉಮೇಶ್
ಯಾದವ್ 3-1-5-0, ವರುಣ್ ಏರಾನ್ 3-1-4-0, ರವೀಂದ್ರ
ಜಡೇಜಾ 5-0-7-1, ಅಮಿತ್ ಮಿಶ್ರಾ 2-0-7-0

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com