
ಮೊನಾಕೊ: ತನ್ನ ವಿರುದ್ಧ ಎದ್ದಿರುವ ಡೋಪಿಂಗ್ ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ಕ್ರೀಡಾ ಸಚಿವ ವಿಟಾಲಿ ಮುಟ್ಕೊ, ದೇಶದಲ್ಲಿನ ಡೋಪಿಂಗ್ ವಿಷಮಂಡಲ ವನ್ನು ಬೇರುಸಹಿತ ಕಿತ್ತು ಹಾಕಲು ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ.
ಸರ್ಕಾರದ ಕುಮ್ಮಕ್ಕಿನಿಂದಲೇ ಡೋಪಿಂಗ್ ವ್ಯಾಪಕವಾಗಿ ನಡೆಸಿರುವ ಆರೋಪ ಹೊತ್ತಿರುವ ರಷ್ಯಾ ದೇಶವನ್ನು ಮುಂದಿನ ವರ್ಷ ನಡೆಯಲಿರುವ ರಿಯೊ ಒಲಿಂಪಿಕ್ಸ್‌ನಿಂದ ಬಹಿಷ್ಕಾರಗೊಳಿಸುವ ಸಾಧ್ಯತೆಗಳಿದ್ದು, ಶುಕ್ರವಾರ ಆರಂಭಗೊಂಡ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಇದು ನಿರ್ಧಾರವಾಗಲಿದೆ.
Advertisement