ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ)
ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ)

ಸೆಮಿಫೈನಲ್‌ಗೆ ಸೈನಾ ನೆಹಾಲ್

ಹಾಲಿ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಚೀನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
Published on

ಫುಜೌ: ಹಾಲಿ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಚೀನಾ ಓಪನ್  ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ  ಕ್ವಾರ್ಟರ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸೈನಾ ತಮ್ಮ ಪ್ರತಿಸ್ಪರ್ಧಿ ಜಪಾನ್ ನ ನೊಜೊಮಿ ಒಕುಹರಾ ವಿರುದ್ಧ ೨೧-೧೬, ೨೧-೧೩  ನೇರ ಸೆಟ್‌ಗಳ ಅಂತರದಲ್ಲಿ ಜಯಿಸಿದರು. ಪಂದ್ಯದಲ್ಲಿ ಹೆಚ್ಚು ಒತ್ತಡ ಎದುರಿಸದೇ ಆಡಿದ ಸೈನಾ ಅನಾಯಾಸವಾಗಿ ಜಯಪಡೆದರು.

೪೨ ನಿಮಿಗ ಳ  ಕಾಲ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್, 10ನೇ ರ್ಯಾಕಿಂಗ್ ನ ನೊಜೊಮಿ ವಿರುದ್ಧ  ಸುಲಭವಾಗಿ ನಿಯಂತ್ರಣ ಸಾಧಿಸಿದರು. ಪಂದ್ಯದ ಆರಂಭಿಕ ಹಂತದಿಂದ  ಅಂತ್ಯದವರೆಗೂ ಸೈನಾಗೆ ಪ್ರತಿರೋಧ ನೀಡಲು ನೊಜೊಮಿ ಸಂಪೂರ್ಣವಾಗಿ ವಿಫಲರಾದರು. ಆ ಮೂಲಕ ಸೈನಾ ನೊಜೊಮಿ ವಿರುದ್ಧ ಸತತ ನಾಲ್ಕು ಪಂದ್ಯಗಳಲ್ಲೂ ಗೆದ್ದ ಸಾಧನೆ  ಮಾಡಿದ್ದಾರೆ.

ಸೈನಾ ನೆಹ್ವಾಲ್ ತಮ್ಮ ಮುಂದಿನ ಪಂದ್ಯದಲ್ಲಿ ೨೦೧೧ರ ವಿಶ್ವ ಚಾಂಪಿಯನ್ ಮತ್ತು ೨೦೧೨ರ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಯಿಹಾನ್ ವಾಂಗ್ ವಿರುದ್ಧ ಸೆಣಸಲಿ ದ್ದಾರೆ.  ಸೈನಾ  ಅವರ  ಪ್ರಬಲ ಪ್ರತಿಸ್ಪಧಿಗಳಲ್ಲಿ ವಾಂಗ್ ಪ್ರಮುಖರಾಗಿದ್ದು, ಈಕೆ ವಿರುದ್ಧ ಸೈನಾ ೯ ಬಾರಿ  ಸೋಲನುಭವಿಸಿದ್ದಾರೆ. ಶನಿವಾರ ನಡೆಯಲಿರುವ ಪಂದ್ಯ ಸೈನಾ ಪಾಲಿಗೆ ಮಹತ್ವವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com