ಡೋಪಿಂಗ್ ಪ್ರಕರಣಕ್ಕೆ ಐಎಎಎಫ್ ನಿಂದ ತಾತ್ಕಾಲಿಕ ಅಮಾನತು ಶಿಕ್ಷೆ ಬರೆ

ಡೋಪಿಂಗ್, ವ್ಯಾಪಕ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ರಷ್ಯಾವನ್ನು ತಾತ್ಕಾಲಿಕವಾಗಿ ಅಥ್ಲೆಟಿಕ್ ಚಾಂಪಿಯನ್-ಶಿಪ್‍ನಿಂದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಡೋಪಿಂಗ್, ವ್ಯಾಪಕ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ರಷ್ಯಾವನ್ನು ತಾತ್ಕಾಲಿಕವಾಗಿ ಅಥ್ಲೆಟಿಕ್ ಚಾಂಪಿಯನ್-ಶಿಪ್‍ನಿಂದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ (ಐಎಎಎಫ್ ) ಅಮಾನತುಗೊಳಿಸಿದ್ದು, ಇದರಿಂದ ಬಹು-ನಿರೀಕ್ಷೆಯ ರಿಯೋ ಒಲಿಂಪಿಕ್ಸ್
ಕ್ರೀಡಾಕೂಟಕ್ಕೆ ಇನ್ನು ಕೇವಲ 8 ತಿಂಗಳು ಇರುವಂತೆಯೇ ರಷ್ಯಾ ಅಥ್ಲೀಟ್‍ಗಳು ಈ ಮಹಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತವಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ರಷ್ಯಾ ವಿರುದ್ಧ ಪ್ರಬಲ ಆರೋಪ ಕೇಳಿಬಂದಿದ್ದರಿಂದ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ (ಐಎಎಎಫ್)ಯ ಆಡಳಿತ ಮಂಡಳಿ ಸಭೆಯು ತಳೆದ ಈ ಮಹತ್ತರ ಹಾಗೂ ಐತಿಹಾಸಿಕ ನಿರ್ಧಾರವು ಇಂಥದ್ದೊಂದು ಆತಂಕವನ್ನು ರಷ್ಯನ್ ಅಥ್ಲೀಟ್‍ಗಳಲ್ಲಿ ತಂದಿರಿಸಿದೆ. ಇನ್ನೊಂದೆಡೆ 2016ರ ವಿಶ್ವ ರೇಸ್ ವಾಕಿಂಗ್ ಕಪ್ ಮತ್ತು ವಿಶ್ವ ಕಿರಿಯರ ಚಾಂಪಿಯನ್‍ಶಿಪ್‍ನ ಆತಿಥ್ಯಕ್ಕೂ ರಷ್ಯಾಗೆ ಹಿನ್ನಡೆಯಾಗಿದೆ.

ಮುಂದಿನ ಪರಿಣಾಮಗಳು: ತಾತ್ಕಾಲಿಕ ನಿಷೇಧದ ಶಿಕ್ಷೆ : ತಕ್ಷಣದಿಂದಲೇ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಷ್ಯಾದ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಳುಗಳು ಶಿಕ್ಷೆ ತೆರವಾಗುವವರೆಗೂ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸುವಂತಿಲ್ಲ. ಆದರೆ, ಡೋಪಿಂಗ್ ಜಾಲವನ್ನು ಬೇರು ಸಹಿತ ಕಿತ್ತುಹಾಕುವುದಾಗಿ ರಷ್ಯಾ ಸರ್ಕಾರ ಐಎಎಎಫ್‍ಗೆ ಆಶ್ವಾಸನೆ ನೀಡಿರುವುದರಿಂದ, ರಷ್ಯಾಕ್ಕೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಲಾಗಿದೆ. ಹಾಗಾಗಿ, ರಷ್ಯಾ ಸರ್ಕಾರವು ಡೋಪಿಂಗ್ ಸ್ವಚ್ಛತಾ ಅಭಿಯಾನ ಆರಂಭಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ರಷ್ಯಾ ಸರ್ಕಾರದ ಈ ಕಾರ್ಯ ಹಾಗೂ ಅದರ ಫಲಿತಾಂಶ ಐಎಎಎಫ್‍ಗೆ ತೃಪ್ತಿಯಾದರೆ ಮಾತ್ರ ನಿಷೇಧ ತೆರವುಗೊಳ್ಳುವ ಸಾಧ್ಯತೆ ಇದೆ.

ಒಲಿಂಪಿಕ್ಸ್ ಸಂಸ್ಥೆಯಿಂದ ಕಾದು ನೋಡುವ ನಿರ್ಧಾರ: ಇತ್ತ ಐಎಎಎಫ್ ನ ಈ ನಿಲುವನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ), ಕಾದು ನೋಡುವ ನಿರ್ಧಾರ ಕೈಗೊಂಡಿದೆ.

ವ್ಯಾಪಕ ಖಂಡನೆ: ರಷ್ಯಾವನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ತಾತ್ಕಾಲಿಕವಾಗಿ ನಿಷೇ„ಸಬೇಕೇ, ಬೇಡವೇ ಎಂಬ ವಿಚಾರವಾಗಿ ನಡೆದ ಮತದಾನದಲ್ಲಿ ರಷ್ಯಾ ಅಮಾನತು ಬೆಂಬಲಿಸಿ 23 ಮತಗಳು ಬಿದ್ದರೆ, ವಿರೋಧಿಸಿ ಕೇವಲ 1 ಮತ ಪ್ರಾಪ್ತವಾಯಿತು. ರಷ್ಯಾ ಡೋಪಿಂಗ್ ಪ್ರಕರಣವನ್ನು `ಆಳವಾದ ಬೇರುಗಳುಳ್ಳ ಮಹಾ ಮೋಸ'ವೆಂದು ಬಣ್ಣಿಸಿದ ಐಎಎಎಫ್ ರಷ್ಯಾ ಅಮಾನತು ನಿರ್ಧಾರಕ್ಕೆ ಅಂಕಿತ ಹಾಕಿತು. ಇತಿಹಾಸದಲ್ಲೇ ಮೊದಲು ಐಎಎಎಫ್ ವತಿಯಿಂದ ರಾಷ್ಟ್ರವೊಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಂದ ಈ ರೀತಿ ನಿಷೇಧಕ್ಕೊಳಗಾಗಿರುವುದು ಇದೇ ಮೊದಲು. ಐಎಎಎಫ್‍ನ ಈ ನಿರ್ಧಾರವನ್ನು ಅದರ ಅಧ್ಯಕ್ಷ ಸೆಬಾಸ್ಟಿಯನ್ ಕೋ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ದೊಡ್ಡಮಟ್ಟದಲ್ಲಿ ಮೋಸದಾಟವಾಡಿರುವ ರಷ್ಯಾದ ವಿರುದ್ಧ ಇಂಥದ್ದೊಂದು ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇದು ಬಿಟ್ಟರೆ ಎಐಐಎಫ್ ಮುಂದೆ ಅನ್ಯ ಮಾರ್ಗವಿರಲಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com