ಲಿಯಾಂಡರ್ ಪೇಸ್-ಮಹೇಶ್ ಭೂಪತಿ
ಕ್ರೀಡೆ
ಕೋಲ್ಕತ್ತಾದಲ್ಲಿ ಪೇಸ್-ಭೂಪತಿ ಆಟ
ಭಾರತ ಟೆನಿಸ್ ಲೋಕದ ದಿಗ್ಗಜರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಮತ್ತೊಮ್ಮೆ ಮೈದಾನದಲ್ಲಿ...
ಕೋಲ್ಕತಾ: ಭಾರತ ಟೆನಿಸ್ ಲೋಕದ ದಿಗ್ಗಜರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೋಲ್ಕತಾ ಟೆನಿಸ್ ಪ್ರೇಮಿಗಳಿಗಷ್ಟೇ ಅಲ್ಲದೆ, ದೇಶದ ಟೆನಿಸ್ ಪ್ರೇಮಿಗಳನ್ನೂ ಸಂತಸಗೊಳಿಸಿದೆ. ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಹೆಸರಾಂತ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ ಬುಧವಾರ ಕೋಲ್ಕತಾದಲ್ಲಿ ಪ್ರದರ್ಶನ ಪಂದ್ಯ ಒಂದ ನ್ನಾಡಲಿದ್ದು, ಟೆನಿಸ್ ಅಭಿಮಾನಿಗಳಲ್ಲಿ ಪುಳಕವನ್ನುಂಟುಮಾಡಿದೆ. ಅಂತಾರಾಷ್ಟ್ರೀಯ ಪ್ರೀಮಿ ಯರ್ ಟೆನಿಸ್ ಲೀಗ್‍ನ ಭಾಗವಾಗಿ ಮಾಸ್ಟರ್ಸ್ ಕೋಲ್ಕತಾ ಎಂಬ ಹೆಸರಿನಲ್ಲಿ ಈ ಪ್ರದರ್ಶನ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 2ರಿಂದ ಐಪಿಟಿಎಲ್ ಟೂರ್ನಿ ಆರಂಭವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ