ಸಿಂಧು, ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್‍ಗೆ

ಭಾರತದ ಎರಡನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 120,000 ಡಾಲರ್ ಮೊತ್ತದ ಮಕೌ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ ಎಂಟರ ಘಟ್ಟ ತಲುಪಿದ್ದಾರೆ...
ಪಿವಿ ಸಿಂಧು (ಸಂಗ್ರಹ ಚಿತ್ರ)
ಪಿವಿ ಸಿಂಧು (ಸಂಗ್ರಹ ಚಿತ್ರ)

ಮಕೌ: ಭಾರತದ ಎರಡನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 120,000 ಡಾಲರ್ ಮೊತ್ತದ ಮಕೌ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ  ಅಂತಿಮ ಎಂಟರ ಘಟ್ಟ ತಲುಪಿದ್ದಾರೆ.

ಗುರುವಾರ ನಡೆದ ಪ್ರೀಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅವರು ಇಂಡೋನೇಷಿಯಾದ ಲಿಂಡಾವೆನಿ ಫೆನೆಟ್ರಿ ವಿರುದ್ಧ 2117, 2118ರ ಎರಡು ನೇರ ಗೇಮ್ಗಳ ಆಟದಲ್ಲಿ ಗೆಲುವು ಸಾಧಿಸಿ  ಕ್ವಾರ್ಟರ್ಫೈನಲ್ ಗೆ ಅರ್ಹತೆ ಪಡೆದರು. ಎರಡು ಬಾರಿಯ ವಿಶ್ವ ಚಾಂಪಿಯನ್‍ಶಿಪ್‍ನ ಕಂಚು ಪದಕ ವಿಜೇತೆ ಸಿಂಧು 46 ನಿಮಿಷಗಳ ಕಾಲ ನಡೆದ ರೋಚಕ ಸೆಣಸಾಟದಲ್ಲಿ ಆಕರ್ಷಕ ಪ್ರದರ್ಶನ ನೀಡಿದರು. ಸೆಮಿಫೈನಲ್‍ಗೆ ಪ್ರವೇಶ ಪಡೆಯಲು ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ಚೆನ್ ಯುಫೆಯಿ ವಿರುದ್ಧ ಕಾದಾಡಲಿದ್ದಾರೆ.

ಇತ್ತ ಪುರುಷರ ವಿಭಾಗದಲ್ಲಿ ಎಚ್.ಎಸ್. ಪ್ರಣಯ್ ಮತ್ತು ಸಾಯಿ ಪ್ರಣೀತ್ ಕೂಡ ಅಂತಿಮ ಎಂಟರ ಘಟ್ಟ ತಲುಪಿದ್ದಾರೆ. ಪ್ರಣಯ್ ಚೀನಾದ ಕಿಯಾವೊ ಬಿನ್ ವಿರುದ್ಧ 1221, 2111, 2119ರಿಂದ  ಗೆಲುವು ಸಾಧಿಸಿದರೆ, ಇತ್ತ ಸಾಯಿ ಪ್ರಣೀತ್ ಇಂಡೋನೇಷಿಯಾದ ಕುರ್ನಿಯವಾನ್ ಟೆಜಾನೊ ಎದುರು 2115, 2116ರಿಂದ ಜಯಭೇರಿ ಬಾರಿಸಿ ಕ್ವಾರ್ಟರ್ಫೈನಲ್ ತಲುಪಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com