ಭಾರತ ಹಾಕಿ ತಂಡ (ಸಂಗ್ರಹ ಚಿತ್ರ)
ಭಾರತ ಹಾಕಿ ತಂಡ (ಸಂಗ್ರಹ ಚಿತ್ರ)

ಭಾರತ-ಅರ್ಜೆಂಟೀನಾ ಹಣಾಹಣಿ

ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟದ ಪೂರ್ವ ತಯಾರಿ ಎಂಬಂತೆ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಫೈನಲ್‍ಗೆ ಭಾರತ ಅಣಿಯಾಗಿದ್ದು, ತವರಿನಲ್ಲಿ ಭರ್ಜರಿ ಪ್ರದರ್ಶನ ನೀಡಲು ಸನ್ನದ್ಧವಾಗಿದೆ...

ರಾಯ್ ಪುರ: ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟದ ಪೂರ್ವ ತಯಾರಿ ಎಂಬಂತೆ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಫೈನಲ್‍ಗೆ ಭಾರತ ಅಣಿಯಾಗಿದ್ದು, ತವರಿನಲ್ಲಿ  ಭರ್ಜರಿ ಪ್ರದರ್ಶನ ನೀಡಲು ಸನ್ನದ್ಧವಾಗಿದೆ.

ಕೇವಲ 9 ತಿಂಗಳು ಬಾಕಿ ಉಳಿದಿರುವ ಈ ಮಹಾನ್ ಕೂಟಕ್ಕೆ ಸರ್ದಾರ್ ಸಿಂಗ್ ಸಾರಥ್ಯದ ಭಾರತ ತಂಡ ತನ್ನಲ್ಲಿನ ಬಲಾಬಲಗಳನ್ನು ಇನ್ನಷ್ಟು ಅರಿತುಕೊಳ್ಳಲು ಈ ಪಂದ್ಯಾವಳಿಯು  ನೆರವಾಗಲಿದೆ ಎಂಬ ಆಶಯವನ್ನು ಇರಿಸಿಕೊಳ್ಳಲಾಗಿದೆ. ಹೊಸದಾಗಿ ತಯಾರಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ  ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವದ ಆರನೇ ಶ್ರೇಯಾಂಕಿತ ಭಾರತ ತಂಡವಲ್ಲದೆ, ಪ್ಯಾನ್ ಅಮೆರಿಕ ಚಾಂಪಿಯನ್ ಅರ್ಜೆಂಟೀನಾ ಅಲ್ಲದೆ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ಹಾಲೆಂಡ್, ಜರ್ಮನಿ, ಬೆಲ್ಜಿಯಂ ಮತ್ತು ಗ್ರೇಟ್ ಬ್ರಿಟನ್ ಮತ್ತು ಕೆನಡಾ ತಂಡಗಳನ್ನು `ಎ' ಮತ್ತು `ಬಿ' ಗುಂಪುಗಳಾಗಿ ವಿಂಗಡಿಸಲಿದ್ದು, ಈ ಪಂದ್ಯಾವಳಿಯ ಫೈನಲ್ ಡಿಸೆಂಬರ್ 6ರಂದು ಜರುಗಲಿದೆ. ``ನಮ್ಮ ಪ್ರಮುಖ  ಗುರಿ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವುದೇ ಆಗಿದೆ. ನಾವು ಒಂದು ತಂಡವಾಗಿ ಇನ್ನಷ್ಟು ಪಕ್ವತೆ ತೋರಬೇಕಾಗಿದೆ.

ರಿಯೋ ಒಲಿಂಪಿಕ್ಸ್ ಗೂ ಮುಂಚಿನ ಈ ಪಂದ್ಯಾವಳಿಯನ್ನು ನಾವು ಮಹಾನ್ ಕೂಟಕ್ಕೆ ಭರ್ಜರಿ ತಯಾರಿಯಾಗಿ ಪರಿಗಣಿಸಿದ್ದೇವೆ'' ಎಂದು ಅರ್ಜೆಂಟೈ ನಾ ವಿರುದ್ಧದ ಪಂದ್ಯಕ್ಕೆ ಮುನ್ನಾ  ದಿನವಾದ ಗುರುವಾರ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸರ್ದಾರ್ ಸಿಂಗ್ ತಿಳಿಸಿದರು. ಅಂದಹಾಗೆ ಈ ಟೂರ್ನಿಗೂ ಮುಂಚೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯದ  ಸರಣಿಯನ್ನು ಸೋತಿರುವ ಭಾರತ, ಇದೀಗ ಪುಟಿದೆದ್ದು ನಿಲ್ಲುವ ತವಕದಲ್ಲಿದೆ.

Related Stories

No stories found.

Advertisement

X
Kannada Prabha
www.kannadaprabha.com