ಕಾಂಗರೂ ದಾಳಿಗೆ ಕುಸಿದ ಕಿವೀಸ್

ಆಸೀಸ್‍ನ ವೇಗದ ಬೌಲಿಂಗ್‍ಗೆ ಸಿಲುಕಿ ತರಗೆಲೆಯಂತಾದ ನ್ಯೂಜಿಲೆಂಡ್ ತಂಡ, ಶುಕ್ರವಾರ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕಹೊನಲು ...
ಆಸ್ಟ್ರೇಲಿಯಾ ಆಟಗಾರರು ವಿಕೆಟ್ ಪಡೆದ ಸಂಭ್ರಮ ಆಚರಿಸುತ್ತಿರುವುದು
ಆಸ್ಟ್ರೇಲಿಯಾ ಆಟಗಾರರು ವಿಕೆಟ್ ಪಡೆದ ಸಂಭ್ರಮ ಆಚರಿಸುತ್ತಿರುವುದು
ಅಡಿಲೇಡ್:  ಆಸೀಸ್‍ನ ವೇಗದ ಬೌಲಿಂಗ್‍ಗೆ ಸಿಲುಕಿ ತರಗೆಲೆಯಂತಾದ ನ್ಯೂಜಿಲೆಂಡ್ ತಂಡ, ಶುಕ್ರವಾರ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಹೊನಲು ಬೆಳಕಿನ ಹಾಗೂ 3ನೇ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್‍ನಲ್ಲಿ ಕೇವಲ 202 ರನ್‍ಗಳಿಗೆ ಆಲೌಟ್ ಆಗಿದೆ. ಆನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾವೂ ಸಂಕಷ್ಟಕ್ಕೆ ಸಿಲುಕಿದ್ದು ದಿನದಾಟ ಅಂತ್ಯಗೊಳ್ಳುವಷ್ಟರಲ್ಲಿ 54 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಬ್ರೆಂಡಾನ್ ಮೆಕಲಂ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಆದರೆ, ಅವರ ನಿರ್ಧಾರ ಉದ್ದೇಶಿತ ಫಲ ನೀಡಲಿಲ್ಲ. ಆರಂಭಿಕ ಟಾಮ್  ಲಾಥಮ್  ಅವರು ಅರ್ಧಶತಕ ಗಳಿಸಿದ್ದು ಬಿಟ್ಟರೆ, ಮಿಕ್ಕವರ್ಯಾರೂ ಉತ್ತಮವಾಗಿ ಆಡಲಿಲ್ಲ. ಮತ್ತೊಬ್ಬ ಆರಂಭಿಕ ಗುಪ್ಟಿಲ್ ಸೇರಿದಂತೆ ಕೇನ್
ವಿಲಿಯಮ್ಸನ್, ರಾಸ್ ಟೇಲರ್, ಕ್ರೇಗ್ ಬ್ರಾಸ್  ವೆಲ್, ಟಿಮ್  ಸೌಥೀ ಸೇರಿದಂತೆ ಖುದ್ದು ಮೆಕಲಂ ಸಹಾ ಅಲ್ಪ ಮೊತ್ತಕ್ಕೇ ಪೆವಿಲಿಯನ್‍ಗೆ ಮರಳಿದ್ದು ಕಿವೀಸ್‍ಗೆ ಮುಳುವಾಯಿತು. ಆಸೀಸ್ ಪರವಾಗಿ ಮಿಂಚಿದ ಮಿಚೆಲ್ ಸ್ಟಾರ್ಕ್, ಹ್ಯಾಜೆಲ್‍ವುಡ್ ತಲಾ 3 ವಿಕೆಟ್ ಪಡೆದರೆ, ಪೀಟರ್ ಸಿಡ್ಲ್ ಮತ್ತು ಲಿಯಾನ್ ತಲಾ 2 ವಿಕೆಟ್ ಗಳಿಸಿದರು. ಆನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ , ಆರಂಭದಲ್ಲೇ ಜೊ ಬರ್ನ್ಸ್ ಅವರನ್ನು ಕಳೆದುಕೊಂಡಿತು. ಬಳಿಕ ಕೆಲವೇ ಹೊತ್ತಿನಲ್ಲಿ ಮತ್ತೊಬ್ಬ ಆರಂಭಿಕ ಡೇವಿಡ್ ವಾರ್ನರ್ ಸಹ ಔಟಾದರು. ದಿನಾಂತ್ಯದ ಹೊತ್ತಿಗೆ 2 ವಿಕೆಟ್
ನಷ್ಟಕ್ಕೆ 54 ರನ್ ಗಳಿಸಿರುವ ಆಸ್ಟ್ರೇಲಿಯಾ, 148 ರನ್‍ಗಳ ಹಿನ್ನಡೆ ಹೊಂದಿದೆ. 
ಗಾಯಗೊಂಡ ಸ್ಟಾರ್ಕ್: ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಪಾದದ ಕೀಲು ಉಳುಕಿಗೆ ಒಳಗಾಗಿದ್ದಾರೆ. ಹಾಗಾಗಿ, ಅವರು ದಿನದಾಟದಲ್ಲಿ ಬೌಲ್ ಮಾ ಡಲಿಲ್ಲ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 65.2 ಓವರ್ ಗಳಲ್ಲಿ 202 (ಲಾಥಮ್ 50, ಸ್ಯಾಂಟ್ನರ್ 31; ಸ್ಟಾರ್ಕ್ 24ಕ್ಕೆ 3, ಹ್ಯಾಜೆಲ್‍ವುಡ್ 66ಕ್ಕೆ 3);
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 22 ಓವರ್‍ಗಳಲ್ಲಿ 2 ವಿಕೆಟ್‍ಗೆ 54 (ಶುಕ್ರವಾರ ದಿನಾಂತ್ಯಕ್ಕೆ) (ಸ್ಟೀವನ್ಸ್ಮಿತ್ ಬ್ಯಾಟಿಂಗ್ 24; ವೋಗ್ಸ್ ಬ್ಯಾಟಿಂಗ್ 9;ಬೌಲ್ಟ್ 15ಕ್ಕೆ 1, ಬ್ರಾಸ್‍ವೆಲ್ 6ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com