
ಮುಂಬಯಿ: ಜಗಮೋಹನ್ ದಾಲ್ಮಿಯಾ ಅವರು ನಿಧನ ದಿಂದ ತೆರವಾಗಿದ್ದ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಶಶಾಂಕ್ ಮನೋಹರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಯ ವಿಶೇಷ ಮಹಾಸಭೆಯಲ್ಲಿ ಶಶಾಂಕ್ ಮನೋಹರ್ ಬಿಸಿಸಿಐಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಶಶಾಂಕ್ ಅವರು ಮಾತ್ರ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಹುದ್ದೆಗೆ ಪೂರ್ವ ವಲಯದ ಎಲ್ಲ ಆರು ಅಸೋಸಿಯೇಶನ್ ಗಳು ಅವಿರೋಧವಾಗಿ ಮನೋಹರ್ ಅವರ ಹೆಸರನ್ನು ಸೂಚಿಸಿದ್ದರು. 58ರ ವರ್ಷದ ವಿದರ್ಭ ಮೂಲದ ವಕೀಲ ಮನೋಹರ್ ಎರಡನೇ ಬಾರಿ ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ್ದಾರೆ.
ಇಂದು ನಡೆದ ಬಿಸಿಸಿಐಯ ವಿಶೇಷ ಮಹಾಸಭೆ ಯಲ್ಲಿ ಶಶಾಂಕ್ ಅವರ ನೇಮಕವು ಕೇವಲ ಔಪಚಾರಿಕವಾಗಿ ನಡೆಯಿತು.
Advertisement