ವಯಾಗ್ರದಿಂದ ರನೌಟಾಗಿದ್ದ ಫ್ಲಿಂಟಾಫ್!

ಭಾರತದ ಪಾಲಿಗೆ ಸೌರವ್ ಗಂಗೂಲಿ ಹೇಗೋ, ಇಂಗ್ಲೆಂಡಿಗೆ ಆ್ಯಂಡ್ರೂ ಫ್ಲಿಂಟಾಫ್. ಇಬ್ಬರ ಸ್ಫೋಟವೂ ಒಂದೇ ರೀತಿ...
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಫ್ಲಿಂಟಾಫ್ (ಸಂಗ್ರಹ ಚಿತ್ರ)
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಫ್ಲಿಂಟಾಫ್ (ಸಂಗ್ರಹ ಚಿತ್ರ)

ಭಾರತದ ಪಾಲಿಗೆ ಸೌರವ್ ಗಂಗೂಲಿ ಹೇಗೋ, ಇಂಗ್ಲೆಂಡಿಗೆ ಆ್ಯಂಡ್ರೂ ಫ್ಲಿಂಟಾಫ್ . ಇಬ್ಬರ ಸ್ಫೋಟವೂ ಒಂದೇ ರೀತಿ.

ಇಬ್ಬರೂ ಗೆಲುವಿನ ಸಂಭ್ರಮ ಆಚರಿಸುವಾಗ ಅಂಗಿ ಬಿಚ್ಚಿದವರೇ! ಈಗ ಫ್ಲಿಂಟಾಫ್  ಒಂದು ಪುಸ್ತಕ ಬರೀತಿದ್ದಾರೆ, `ಸೆಕೆಂಡ್ ಇನ್ನಿಂಗ್ಸ್' ಅಂತ. ಇದರಲ್ಲಿ ಪತ್ನಿ ರಾಚೆಲ್ ವೂಲ್ಸ್ ಬಗ್ಗೆ ಸಿಕ್ಕಾಪಟ್ಟೆ  ಹೊಗಳಿದ್ದಾರಂತೆ. `ರಾಚೆಲ್ ಅನ್ನು ಮದ್ವೆ ಆಗೋ ಮುಂಚೆ ನನ್ನ ಕ್ರಿಕೆಟ್ ಬದುಕಿನಲ್ಲಿ ಅನೇಕ ಏರಿಳಿತಗಳಾದವು. ಮದ್ವೆ ಆಗಿದ್ದೇ ಆಗಿದ್ದು, ವೃತ್ತಿಯಲ್ಲಿ ಎಲ್ಲವೂ ಕ್ಲಿಕ್ ಆಯಿತು' ಎಂದಿದ್ದಾರೆ.  `ಫಾರ್ಮ್ ಕೈಕೊಟ್ಟಾಗ, ಟೀಮಿನಿಂದ ಹೊರಬಿದ್ದು ದುಃಖದಲ್ಲಿದ್ದಾಗ ನನ್ನ ಅನೇಕ ಸಮಸ್ಯೆಗಳಿಗೆ ಹೆಗಲು ಕೊಟ್ಟಿದ್ದಾಳೆ. ತಂಡ ಸೋಲುತ್ತಿದ್ದಾಗ ಅವಳು ಒಂದೇ ಸಮನೆ ಅಳುವುದನ್ನೂ  ಕಂಡಿದ್ದೇನೆ' ಎಂದೂ ಹೇಳಿದ್ದಾರೆ.

ಫ್ಲಿಂಟಾಫ್  ಮತ್ತು ರಾಚೆಲ್ ದಂಪತಿಗೆ ಮೂವರು ಮಕ್ಕಳು. ಫ್ಲಿಂಟಾಫ್ ನ ಎಡತೋಳಿನಲ್ಲಿ ಹೆಂಡತಿ, ಮಕ್ಕಳ ಹೆಸರಿನ ಹಚ್ಚೆಯಿದೆ. ಇದೇ ಪುಸ್ತಕದಲ್ಲಿ ಫ್ಲಿಂಟಾಫ್  ಒಂದು ವಯಾಗ್ರ ಕಥೆಯನ್ನೂ  ಹೇಳಿದ್ದಾರಂತೆ. ಇದನ್ನು ಮಾಜಿ ಗಲ್ರ್ ಫ್ರೆಂಡ್ ಹಿಂದೊಮ್ಮೆ ಬಹಿರಂಗ ಮಾಡಿದ್ದಳು ಕೂಡ. ಆಗ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಹಿಂದಿನ ರಾತ್ರಿ ಮೂರು ವಯಾಗ್ರ ಮಾತ್ರೆಗಳನ್ನು ತಗೊಂಡು  ಮಲಗಿದ್ದಾರೆ ಫ್ಲಿಂಟಾಫ್ . ಆ ಅಮಲು ಮರುದಿನವೂ ಇಳಿದಿರಲಿಲ್ಲ. ಈ ಕಾರಣದಿಂದ ಅವರು ರನೌಟ್ ಆಗಬೇಕಾಯಿತಂತೆ! ಈ ಪುಸ್ತಕದಲ್ಲಿ ತಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ  ಬರಕೊಂಡಿದ್ದಾರೆ.

ತೀರಾ ಖಿನ್ನತೆಗೆ ಹೋಗಿದ್ದಾಗ ಕುಡಿತವನ್ನು ಬಿಟ್ಟ ಕತೆ ಹೇಳಿಕೊಂಡಿದ್ದಾರಂತೆ. ಫ್ಲಿಂಟಾಫ್  ಅವರದ್ದು ಇದೇ ಮೊದಲ ಕೃತಿಯಲ್ಲ. ಈ ಹಿಂದೆ ಬೀಯಿಂಗ್ ಫ್ರೆಡ್ಡೀ, ಫ್ರೆಡ್ಡೀ,  ಆ್ಯಂಡ್ರೂ ಫ್ಲಿಂಟಾಫ್ , ಮೈ ಲೈಫ್  ಇನ್ ಪಿಕ್ಚರ್ಸ್, ಆ್ಯಶಸ್ ಟು ಆ್ಯಶಸ್ ಕೃತಿಗಳನ್ನೂ ಬರೆದಿದ್ದಾರೆ. ಅಂದಹಾಗೆ, ಫ್ಲಿಂಟಾಫ್  ಈಗ ಕ್ರಿಕೆಟ್‍ರಂಗದಿಂದ ದೂರವುಳಿದು ಬಾಕ್ಸಿಂಗ್ ರಿಂಗೊಳಗೆ  ಸೇರಿಕೊಂಡಿದ್ದಾರೆ. ಅವರು ಒಳ್ಳೆಯ ಬಾಕ್ಸರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com