ಪೆಪ್ಸಿಕೋ ಬದಲಿಗೆ ವಿವೋಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಶೀರ್ಷಿಕೆ ಪ್ರಯೋಜಕತ್ವದಿಂದ ಪೆಪ್ಸಿಕೋ ಹಿಂದೆ ಸರಿದಿದ್ದು, ಚೀನಾದ ಮೊಬೈಲ್ ಕಂಪನಿ ವಿವೋಗೆ ಪಂದ್ಯದ ಶೀರ್ಷಿಕೆ...
ವಿವೋ
ವಿವೋ
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಶೀರ್ಷಿಕೆ ಪ್ರಯೋಜಕತ್ವದಿಂದ ಪೆಪ್ಸಿಕೋ ಹಿಂದೆ ಸರಿದಿದ್ದು, ಚೀನಾದ ಮೊಬೈಲ್ ಕಂಪನಿ ವಿವೋಗೆ ಪಂದ್ಯದ ಶೀರ್ಷಿಕೆ ಪ್ರಾಯೋಜಕತ್ವ ಸಿಕ್ಕಿದೆ. 
ಸ್ಪಾಟ್ ಫಿಕ್ಸಿಂಗ್ ವಿವಾದದ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ತಂಪು ಪಾನೀಯ ದಿಗ್ಗಜ ಪೆಪ್ಸಿಕೋ ಹಿಂದೆ ಸರಿದಿದೆ. 2013-2017ರವರೆಗೆ 396 ಕೋಟಿ ರು. ಕಟ್ಟಿ ಶೀರ್ಷಿಕೆ ಪ್ರಯೋಜಕತ್ವ ಪಡೆದಿತ್ತು. 
ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಮುಂದಿನ ಎರಡು ವರ್ಷಗಳಿಗೆ ವಿವೋಗೆ ಶೀರ್ಷಿಕೆ ಪ್ರಯೋಜಕತ್ವ ನೀಡಲು ನಿರ್ಧರಿಸಲಾಗಿದೆ.
ಸದ್ಯ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಪಂದ್ಯದ ಪ್ರಾಯೋಜಕತ್ವ ವಹಿಸಿಕೊಂಡಿರುವ ವಿವೋ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲು ಮುಂಚೂಣಿಯಲ್ಲಿದ್ದು, ಪೇಟಿಎಂನೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿತ್ತು. ಪೆಪ್ಸಿಕೋಗೆ ಇದ್ದ ನೀತಿ ನಿಯಮಾವಳಿಗಳೂ, ಈ ಚೀನಾ ಮೂಲದ ಮೊಬೈಲ್ ಕಂಪನಿಗೂ ಅನ್ವಯವಾಗಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com