ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವೀರೇಂದ್ರ ಸೆಹ್ವಾಗ್ ವಿದಾಯ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ತಮ್ಮ 16 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ...
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. 
ವೀರೇಂದ್ರ ಸೆಹ್ವಾಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದನ್ನು ಹಲ್ಲೆಗಳೆದಿದ್ದ ವೀರೇಂದ್ರ ಸೆಹ್ವಾಗ್ ಇಂದು ನಿವೃತ್ತಿಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‍ನಲ್ಲಿ ಕೇವಲ ನಿವೃತ್ತ ಕ್ರಿಕೆಟಿಗರಷ್ಟೇ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ, ಸೆಹ್ವಾಗ್ ಅವರು ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಎರಡನೇ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸೆಹ್ವಾಗ್ ಇದ್ದರು. ಇಂದು ಟ್ವಿಟರ್ ನಲ್ಲಿ ಸೆಹ್ವಾಗ್ ವಿದಾಯ ಘೋಷಿಸಿದ್ದಾರೆ.
251 ಏಕದಿನ ಪಂದ್ಯಗಳನ್ನು ಆಡಿದ್ದ ಸೆಹ್ವಾಗ್ 35.05 ಸರಾಸರಿಯಲ್ಲಿ 8273 ರನ್ ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 15 ಶತಕ ಹಾಗೂ 38 ಅರ್ಧಶತಕ ಕೂಡಿವೆ. 
104 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸೆಹ್ವಾಗ್ 8586 ರನ್ ಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿದ ಹೆಗ್ಗಳಿಕೆ ಸೆಹ್ವಾಗ್ ಗಿದೆ. 23 ಶತಕ. 32 ಅರ್ಧಶತಕ ಸಿಡಿಸಿದ್ದಾರೆ. 
19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದ ಸೆಹ್ವಾಗ್ 394 ರನ್ ಗಳಿಸಿದ್ದು, ಎರಡು ಅರ್ಧ ಶತಕ ಸಿಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com